ದೀಪಾವಳಿಗೆ ಹೌಸ್​ಫುಲ್ 5 ಸಿನಿಮಾ ಘೋಷಿಸಿದ ಅಕ್ಷಯ್ ಕುಮಾರ್!

akshay kumar
Published on

ನವದೆಹಲಿ: ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಶುಕ್ರವಾರ ತಮ್ಮ "ಹೌಸ್‌ಫುಲ್" ಸಿನಿಮಾದ ಐದನೇ ಕಂತನ್ನು ಘೋಷಿಸಿದ್ದಾರೆ. "ದೋಸ್ತಾನಾ" ಮತ್ತು "ಡ್ರೈವ್" ಚಲನಚಿತ್ರಗಳಿಗೆ ಹೆಸರುವಾಸಿಯಾದ ತರುಣ್ ಮನ್ಸುಖಾನಿ ಅವರು "ಹೌಸ್​ಫುಲ್​ 5" ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇದು 2024ರ ದೀಪಾವಳಿಯಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಅಕ್ಷಯ್​ ಕುಮಾರ್ ಜತೆಗೆ, ನಟ ರಿತೇಶ್ ದೇಶಮುಖ್ ಐದನೇ ಅಧ್ಯಾಯಕ್ಕೆ ಹಿಂತಿರುಗಲಿದ್ದಾರೆ. ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರ ಬ್ಯಾನರ್ ನಾಡಿಯಾಡ್ವಾಲಾ ಗ್ರ್ಯಾಂಡ್​ಸನ್ ಎಂಟರ್ಟೈನ್ಮೆಂಟ್ ನಿರ್ಮಿಸಲಿದೆ.

“ಐದನೇ ಬಾರಿಯ ಹುಚ್ಚುತನಕ್ಕೆ ಸಿದ್ಧರಾಗಿ! @ತರುಣ್_ಮನ್ಸುಖಾನಿ ಅವರು ನಿರ್ದೇಶಿಸಿದ #ಸಾಜಿದ್ ನಾಡಿಯಾಡ್ವಾಲಾ ಅವರ #ಹೌಸ್‌ಫುಲ್ 5 ಗೆ ನಿಮ್ಮೆಲ್ಲರನ್ನು ಆಹ್ವಾನಿಸುತ್ತಿದ್ದೇನೆ. 2024ರ ದೀಪಾವಳಿಯಂದು ಚಿತ್ರಮಂದಿರಗಳಲ್ಲಿ ನಿಮ್ಮನ್ನು ನೋಡೋಣ! ” ಎಂದು ಕುಮಾರ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net