

ಮುಂಬೈ: ಒಂದರ ನಂತರ ಒಂದರಂತೆ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್(Akshay Kumar) ಇತ್ತೀಚಿನ ದಿನಗಳಲ್ಲಿ ಒಂದು ಹಿಟ್ಗಾಗಿ ಕಾಯುತ್ತಿದ್ದರು. 2025ರ ಹೊಸ ವರ್ಷದ ಅವರ ಮೊದಲ ಚಿತ್ರ 'ಸ್ಕೈ ಫೋರ್ಸ್' ಅವರ ಎಲ್ಲಾ ನಿರೀಕ್ಷೆಗಳನ್ನು ಮುರಿಯಿತು. ನಿರ್ದೇಶಕ ಅಭಿಷೇಕ್ ಅನಿಲ್ ಕಪೂರ್ ಮತ್ತು ಸಂದೀಪ್ ಕೆವ್ಲಾನಿ ಅವರ ಕಳೆದ ತಿಂಗಳು ಬಿಡುಗಡೆಯಾದ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೋತ ನಂತರ ಈಗ ಒಟಿಟಿ ಪ್ಲಾಟ್‌ಫಾರ್ಮ್‌ಗೆ ಬರಲಿದೆ.
ಸ್ಕೈ ಫೋರ್ಸ್ 2025 ಜನವರಿ 24ರಂದು ಗಣರಾಜ್ಯೋತ್ಸವದ ಸಮದಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದನ್ನು 160 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಸುಮಾರು 144 ರಿಂದ 168 ಕೋಟಿ ಸಂಗ್ರಹಿಸಿದೆ ಎನ್ನಲಾಗಿದೆ. ಅಕ್ಷಯ್ ಕುಮಾರ್ ಜತೆಗೆ ವೀರ್ ಪಹಾಡಿಯಾ, ಸಾರಾ ಅಲಿ ಖಾನ್ ಮತ್ತು ನಿಮ್ರತ್ ಕೌರ್ ಚಿತ್ರದಲ್ಲಿ ಕಾಣಿಸಿಕೊಂಡರು. ಆರಂಭದಲ್ಲಿ ಈ ಚಿತ್ರವು ಸಾಕಷ್ಟು ಆ್ಯಕ್ಷನ್ ದೃಶ್ಯಗಳೊಂದಿಗೆ ಯಶಸ್ವಿಯಾಯಿತು, ಆದರೆ ನಿಧಾನವಾಗಿ ಗಲ್ಲಾಪೆಟ್ಟಿಗೆಯಲ್ಲಿ ಅದರ ಪ್ರಾಬಲ್ಯ ಕ್ಷೀಣಿಸಲು ಪ್ರಾರಂಭಿಸಿತು.
ಈಗ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇದನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ಇದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಬಹುದು. ಮತ್ತು ನೀವು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಈ ಚಿತ್ರವು ಮಾರ್ಚ್ 7, 2025ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ವರದಿ ಆಗಿದೆ.
ಅಕ್ಷಯ ಕುಮಾರ್ ಅವರು 'ಜಾಲಿ ಎಲ್ಎಲ್ಬಿ 3', 'ಕಣ್ಣಪ್ಪ', 'ಹೌಸ್ ಫುಲ್ 5' ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ 'ಭೂತ್ ಬಾಂಗ್ಲಾ', 'ವೆಲ್ಕಮ್ ಟು ದಿ ಜಂಗಲ್', 'ಹೇರಾ ಫೇರಿ 3' ಮತ್ತು ವೇದತ್ ಮರಾಠೆ ವೀರ್ ದೌಡ್ಲೆ ಸಾತ್ ಕೂಡ 2026ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.(ಏಜೆನ್ಸೀಸ್)