ಮಕ್ಕಳು ಉತ್ತಮ ಸಂಸ್ಕಾರ ಮತ್ತು ಗುಣಮಟ್ಟದ ಶಿಕ್ಷಣ ಪಡೆಯುವುದರೊಂದಿಗೆ ಜವಾಬ್ದಾರಿಯುತ ಪ್ರಜೆಗಳಾಗಬೇಕು ಎಂದು ಆಶಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಂ.ಪಾಲ್ ಪ್ರೇಮ್‌ಚಂದ್ ಕಾರ್ಯಕ್ರಮ ಉದ್ಘಾಟಿಸಿದರು. ಸರಸ್ವತಿ ದೇವಿಯ ಪೂಜೆ ಯೊಂದಿಗೆ ಆರಂಭವಾದ ಪ್ರಕ್ರಿಯೆಯಲ್ಲಿ ಪಾಲಕರ ಸಮುಖ ಮಕ್ಕಳಿಗೆ ಓಂಕಾರ ಬರೆಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಲಾಯಿತು. ನಂತರ ಕನ್ನಡ ಅಕ್ಷರ ಮಾಲೆಯ ಮೊದಲ ಅಕ್ಷರಗಳನ್ನು ಬರೆಸಿದ್ದು ಗಮನ ಸೆಳೆಯಿತು. ಶಿಕ್ಷಣ ಸಂಸ್ಥೆ ಟ್ರಸ್ಟಿಗಳು, ಶಿಕ್ಷಕರು ಇದ್ದರು.