

ಬೆಂಗಳೂರು:
ರಾಜ್ಯದಲ್ಲಿಯೂ ಾರ್ಟಿೈಡ್ (ಸಾರವವರ್ಧಿತ )ಅಕ್ಕಿಯನ್ನು ನೀಡಬೇಕು ಎಂದು ಮೇಲ್ಮನೆಯಲ್ಲಿ ಕಾಂಗ್ರೆಸ್ ಸದಸ್ಯ ಡಾ.ಯತೀಂದ್ರ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಎನ್‌ಎ್ಎಸ್‌ಎ ಲಾನುಭವಿಗಳಿಗೆ ಅಪೌಷ್ಠಿಕತೆ ನೀಗಿಸಲು ಾರ್ಟಿೈಡ್ ಅಕ್ಕಿ ನೀಡುತ್ತಿದೆ. ಅದೇ ರೀತಿಯಲ್ಲಿ ರಾಜ್ಯ ಸರ್ಕಾರವೂ ನೀಡಬೇಕು ಎಂದು ಆಗ್ರಹಿಸಿದರು.
ಮಾಮೂಲಿ ಅಕ್ಕಿ ಜೊತೆಗೆ ಹೆಚ್ಚು ಖನಿಜಾಂಶಗಳನ್ನು ಸೇರಿಸಿ ಕೊಡುವುದು ಾರ್ಟಿೈಡ್ ಅಕ್ಕಿ. ಒಂದು ಕ್ವಿಂಟಾಲ್‌ಗೆ ಒಂದು ಕೆಜಿ ಖನಿಜಾಂಶ ಇರುವ ಅಕ್ಕಿ ಸೇರಿಸಿ ಕೊಡಲಾಗುತ್ತಿದೆ. ಇದು ಒಳ್ಳೆಯ ಕ್ರಮವಾಗಿದೆ. ಅಪೌಷ್ಠಿಕತೆ ನೀಗಿಸುವ ನಿಟ್ಟಿನಲ್ಲಿ ಾರ್ಟಿೈಡ್ ಅಕ್ಕಿ ಮಹತ್ವದ್ದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, ರಾಜ್ಯದಲ್ಲಿ ಸದ್ಯಕ್ಕೆ ಾರ್ಟಿೈಡ್ ಅಕ್ಕಿ ಕೊಡುವ ಪ್ರಸ್ತಾಪವಿಲ್ಲ. ಮುಂದೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಕೆಂದ್ರ ಯೋಜನೆ ಅಡಿಯಲ್ಲಿ ಬಳ್ಳಾರಿ, ಬಾಗಲಕೋಟೆ, ಯಾದಗಿರಿ, ಕೊಪ್ಪಳ, ಹಾವೇರಿ, ಉತ್ತರ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಗದಗ, ಶಿವಮೊಗ್ಗ, ದಾವಣಗೆರೆ, ಕಲಬುರ್ಗಿ ಜಿಲ್ಲೆಯಲ್ಲಿ ಸಾರವವರ್ಧಿತ ಅಕ್ಕಿ ಕೊಡಲಾಗುತ್ತಿದೆ ಎಂದರು.