ನವರಾತ್ರಿ ಆಚರಣೆಯಿಂದ ಹೊಸ ಚೈತನ್ಯ

8srl1 dasara
ಶಿರಾಳಕೊಪ್ಪದಲ್ಲಿ ಅಕ್ಕಮಹಾದೇವಿ ಪ್ರತಿಷ್ಠಾನದ ದಸರಾ ಉತ್ಸವದಲ್ಲಿ ತೇಜಸ್ವಿನಿ ರಾಘವೇಂದ್ರ, ರೂಪಾ ಹಾಲೇಶ್, ಗೀತಾ , ಪ್ರಿಯದರ್ಶಿನಿ, ಅಪರ್ಣಾ ಗುರುಮೂರ್ತಿ ಇತರರಿದ್ದರು.
Published on

ಶಿರಾಳಕೊಪ್ಪ: ತಾಲೂಕಿನಲ್ಲಿ ಅತ್ಯಂತ ಉತ್ಸಾಹದಿಂದ ಮಹಿಳೆಯರು ನವರಾತ್ರಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ನಿರ್ದೇಶಕಿ ತೇಜಸ್ವಿನಿ ರಾಘವೇಂದ್ರ ಹೇಳಿದರು.
ಬಸವೇಶ್ವರ ಸಮುದಾಯ ಭವನದಲ್ಲಿ ಅಕ್ಕಮಹಾದೇವಿ ಪ್ರತಿಷ್ಠಾನದ ದಸರಾ ಉತ್ಸವ ಸಮಿತಿಯಿಂದ ಬಾಗಿನ ಸ್ವೀಕರಿಸಿ ಮಾತನಾಡಿದರು.
ಇಲ್ಲಿಯ ಮಹಿಳೆಯರು ನವರಾತ್ರಿ ಅಂಗವಾಗಿ ಪ್ರತಿದಿನ ನಡೆಸುತ್ತಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ತಾಲೂಕಿನಾದ್ಯಂತ ಹೆಸರು ಮಾಡಿವೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಂಡು ಜೆಲ್ಲೆಯಲ್ಲಿ ಹೆಸರು ಗಳಿಸುವಂತಾಗಲಿ ಎಂದು ಆಶಿಸಿದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷೆ ಗೌರಮ್ಮ ಮಾತನಾಡಿ, ಪ್ರತಿದಿನ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ, ಸಾಹಿತ್ಯ, ಭಜನೆ, ದೇವಿ ಪುರಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ನಮಗೆ ಸಂತಸ ತಂದಿದೆ ಎಂದರು.
ಅಕ್ಕಮಹಾದೇವಿ ಪ್ರತಿಷ್ಠಾನದ ಅಧ್ಯಕ್ಷೆ ರೂಪಾ ಹಾಲೇಶ್, ಉಪಾಧ್ಯಕ್ಷೆ ಗೀತಾ , ಖಜಾಂಚಿ ಪ್ರಿಯದರ್ಶಿನಿ, ಅಪರ್ಣಾ ಗುರುಮೂರ್ತಿ, ಮೈಸೂರಿನ ನಂದಿನಿ ಸುದೀಪ್, ಜಾಹ್ನವಿ ಕೊಟ್ರೇಶ್, ಹರೀಶ್ ಶಾಸ್ತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net