ತನ್ನ ಜನರ ಮೇಲೆಯೇ ಬಾಂಬ್ ದಾಳಿ ನಡೆಸುವ ದೇಶ ಪಾಕಿಸ್ತಾನ: ವಿಶ್ವಸಂಸ್ಥೆಯಲ್ಲಿ ಪಾಕ್​ ವಿರುದ್ಧ ಹರಿಹಾಯ್ದ ಭಾರತ | India

Untitled design - 2025-10-07T085254.173
Published on

India: ತನ್ನ ಜನರ ಮೇಲೆಯೇ ಬಾಂಬ್ ದಾಳಿ ನಡೆಸುವ ದೇಶ ಅದು ಎಂದು ಪಾಕಿಸ್ತಾನ ವಿರುದ್ಧ ಭಾರತ ವಿಶ್ವಸಂಸ್ಥೆಯಲ್ಲಿ ಹರಿಹಾಯ್ದಿದೆ.

ಮಹಿಳೆಯರು, ಶಾಂತಿ ಮತ್ತು ಭದ್ರತೆ ಕುರಿತಾದ ಮುಕ್ತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್, ಪಾಕಿಸ್ತಾನವು ವ್ಯವಸ್ಥಿತ ನರಮೇಧ ನಡೆಸುತ್ತದೆ ಮತ್ತು ತಪ್ಪು ನಿರ್ದೇಶನ ಮತ್ತು ಅತಿಶಯೋಕ್ತಿಯಿಂದ ಜಗತ್ತನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಬಹುದು ಎಂದು ತೀವ್ರವಾಗಿ ತರಾಟೆಗೆ ತಗೆದುಕೊಂಡರು.

ಪಾಕಿಸ್ತಾನವು 1971 ರಲ್ಲಿ ಆಪರೇಷನ್ ಸರ್ಚ್‌ಲೈಟ್ ನಡೆಸಿದ ದೇಶವಾಗಿದ್ದು, ತನ್ನದೇ ಆದ ಸೈನ್ಯದಿಂದ 400,000 ಮಹಿಳಾ ನಾಗರಿಕರ ಮೇಲೆ ಜನಾಂಗೀಯ ಹತ್ಯೆಯ ಸಾಮೂಹಿಕ ಅತ್ಯಾಚಾರದ "ವ್ಯವಸ್ಥಿತ ಅಭಿಯಾನ"ಕ್ಕೆ ಅನುಮತಿ ನೀಡಿದೆ. ಆದರೆ, ಜಗತ್ತು ಪಾಕಿಸ್ತಾನದ ಪ್ರಚಾರವನ್ನು ನೋಡುತ್ತದೆ" ಎಂದು ಹೇಳಿದರು.

"ವಿಶ್ವದ ಅತ್ಯಂತ ಕೆಟ್ಟ ಮಾನವ ಹಕ್ಕುಗಳ ದಾಖಲೆಗಳನ್ನು ಹೊಂದಿರುವ ದೇಶವು ಇತರರಿಗೆ ಉಪನ್ಯಾಸ ನೀಡಲು ಪ್ರಯತ್ನಿಸುವುದು ನಮಗೆ ತೀವ್ರ ವಿಪರ್ಯಾಸವೆನಿಸುತ್ತದೆ" ಎಂದು ಜಿನೀವಾದಲ್ಲಿನ ಭಾರತದ ಶಾಶ್ವತ ಮಿಷನ್‌ನ ಕೌನ್ಸಿಲರ್ ಕೆ.ಎಸ್. ಮೊಹಮ್ಮದ್ ಹುಸೇನ್ ಕಳೆದ ಮಂಗಳವಾರ ಜಿನೀವಾದಲ್ಲಿ ನಡೆದ ಮಾನವ ಹಕ್ಕುಗಳ ಮಂಡಳಿಯ 60 ನೇ ಅಧಿವೇಶನದಲ್ಲಿ ಸಾಮಾನ್ಯ ಚರ್ಚೆಯಲ್ಲಿ ಹೇಳಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net