ವಿರೋಧ ಪಕ್ಷಗಳನ್ನು ಒಡೆಯುವುದು ಬಿಜೆಪಿಯ ಹಳೇ ಚಾಳಿ ಎಂದು ಆರೋಪಿಸಿದ ಅಖಿಲೇಶ್ ಯಾದವ್, ಬಿಜೆಪಿ ಈ ಹಿಂದೆಯೂ ನಮ್ಮ ಶಾಸಕರು, ಎಂಎಲ್‌ಸಿಗಳು ಮತ್ತು ರಾಜ್ಯಸಭಾ ಸದಸ್ಯರನ್ನು ಆಮಿಷ ಒಡ್ಡಿ ಸೆಳೆದಿದೆ. ಆಸೆ, ಆಮಿಷ ಅಥವಾ ಇಡಿ-ಐಟಿ ಸಂಸ್ಥೆಗಳ ಭಯದಿಂದ ಹೆದರಿದವರು ಮಾತ್ರ ಪಕ್ಷ ಬಿಟ್ಟು ಹೋಗುತ್ತಾರೆ. ಸ್ವಾರ್ಥಿಗಳಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ, ಇಂತಹ ಸವಾಲುಗಳನ್ನು ಎದುರಿಸಲು ಸಮಾಜವಾದಿ ಪಕ್ಷ ಸಂಪೂರ್ಣ ಸಿದ್ಧವಾಗಿದೆ ಎಂದು ಗುಡುಗಿದ್ದಾರೆ.