ಕಟ್ಟುನಿಟ್ಟಿನ ಲಾಕ್​ಡೌನ್​: ರಸ್ತೆಗೆ ಇಳಿದವರಿಗೆ ಬಿತ್ತು ಲಾಠಿ ಏಟು, ವಾಹನ ಸೀಜ್​

WhatsApp Image 2021-05-10 at 8.10.35 AM
Published on

ಬೆಂಗಳೂರು: ಕರೊನಾ ಎರಡನೇ ಅಲೆ ಕೈಮೀರುತ್ತಿರುವ ಹಿನ್ನೆಲೆ ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಇಂದಿನಿಂದ 14 ದಿನದವರೆಗೆ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಯಾಗಿದ್ದು, ರಾಜ್ಯಾದ್ಯಂತ ಪೊಲೀಸರು ನಾಕಾಬಂದಿ ಹಾಕಿ ಕಾವಲು ಕಾಯುತ್ತಿದ್ದಾರೆ.

ಕರೊನಾ ಸರಪಳಿ ತುಂಡರಿಸಲು ಲಾಕ್​ಡೌನ್​ ಜಾರಿಯಾಗಿದ್ದರೂ ಕೆಲವರು ಅನಗತ್ಯವಾಗಿ ರಸ್ತೆಗೆ ಬಂದು ಪೊಲೀಸರ ಲಾಠಿ ಏಟು ತಿಂದಿದ್ದಾರೆ. ಬೆಳ್ಳಂಬೆಳಗ್ಗೆ ಫೀಲ್ಡ್​ಗಿಳಿದ ಪೊಲೀಸರು ವಾಹನ ಸವಾರರಿಗೆ ಬಿಸಿ ಬಿಸಿ ಕಜ್ಜಾಯ ಕೊಟ್ಟು, ವಾಹನ ಸೀಜ್​ ಮಾಡಿ ವಾರ್ನಿಂಗ್​ ಮಾಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು.

ವಿನಾಕಾರಣ ರಸ್ತೆಗೆ ಇಳಿದು ಪೊಲೀಸರ ಕೈಗೆ ಸಿಕ್ಕಿಬಿದ್ದ ವಾಹನ ಸವಾರರು, 'ನಮ್ಮಿಂದ ತಪ್ಪಾಗಿದೆ. ಪ್ಲೀಸ್​ ಬೈಕ್ ಕೊಡಿ ಸರ್​' ಎಂದು ಪೊಲೀಸರಿಗೆ ಕೆಲವರು ದುಂಬಾಲು ಬಿದ್ದಿದ್ದರು. ಹಲವರು ಪೊಲೀಸರೊಂದಿಗೆ ವಾಗ್ವಾದಕ್ಕಿಳು ಲಾಠಿ ಏನು ತಿಂದರು. ಸಾವಿರಾರು ಬೈಕ್​ ಮತ್ತು ಕಾರುಗಳನ್ನು ಪೊಲೀಸರು ಸೀಜ್​ ಮಾಡಿದ್ದಾರೆ.

ಬಳ್ಳಾರಿಯಲ್ಲೊಬ್ಬ ಕಾರಿಗೆ ಪೊಲೀಸ್ ಬೋರ್ಡ್ ಹಾಕಿಕೊಂಡು ತಿರುಗಾಡುವಾಗ ಸಿಕ್ಕಿಬಿದ್ದಿದ್ದಾನೆ. ಬಳ್ಳಾರಿಯ ರಾಯಲ್ ಸರ್ಕಲ್​ನಲ್ಲಿ ಪೊಲೀಸ್ ಕೈಗೆ ಸಿಕ್ಕಿಬಿದ್ದವನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net