ಕಾನ್ ಫೆಸ್ಟಿವಲ್; 23 ವರ್ಷಗಳ ಬಳಿಕ ಸೀರೆ ಲುಕ್​ಅನ್ನು ಮರುಸೃಷ್ಟಿಸಿದ ಐಶ್ವರ್ಯಾ ರೈ| Aishwarya-rai

aishwarya
Published on

ನವದೆಹಲಿ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ 78 ನೇ ಕಾನ್ಸ್ ಚಲನಚಿತ್ರೋತ್ಸವದ 2025 ರ ಆವೃತ್ತಿಯಲ್ಲಿ ಸೀರೆ ಹುಟ್ಟು ಮಿಂಚಿದ್ದಾರೆ. 2002 ರಲ್ಲಿ ತಮ್ಮ ದೇವದಾಸ್ ಚಿತ್ರದ ಮೊದಲ ಪ್ರದರ್ಶನಕ್ಕಾಗಿ ಕಾನ್ಸ್‌ಗೆ ಪಾದಾರ್ಪಣೆ ಮಾಡಿದ ನಟಿ 23 ವರ್ಷಗಳ ಬಳಿಕ ತಮ್ಮ ರೆಡ್ ಕಾರ್ಪೆಟ್ ನೋಟವನ್ನು ಮರುಸೃಷ್ಟಿಸಿದ್ದಾರೆ.

ಭಾರತ, ಉಗ್ರಗಾಮಿಗಳನ್ನು ಬೆಂಬಲಿಸುವ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ಎಂಬ ಸೇನಾ ಕಾರ್ಯಾಚರಣೆ ನಡೆಸಿತ್ತು. ಇದರ ಬೆಂಬಲವಾಗಿ ಐಶ್ವರ್ಯ ಅವರು ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ ಎಂದು ಹೇಳಲಾಗ್ತಿದೆ.

ಫ್ರಾನ್ಸ್‌ನ ಕಾನ್ ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಐಶ್ವರ್ಯಾ ಅವರು ಐವರಿ ಬಣ್ಣದ ಸೀರೆಯ ಜೊತೆ ಹಣೆಗೆ ಸಿಂಧೂರವನ್ನು ಧರಿಸಿದ್ದರು. ಅಷ್ಟೇ ಅಲ್ಲದೇ ಸಿಂಧೂರ ಎದ್ದು ಕಾಣುವ ಹಾಗೇ ಹೇರ್‌ಸ್ಟೈಲ್ ಕೂಡ ಮಾಡಿದ್ದರು.

ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿತ್ತು. ಆದರೆ ಐಶ್ವರ್ಯಾ ಅವರು ಕಾನ್ ಚಿತ್ರೋತ್ಸವದ ಮೂಲಕ ಆ ಗಾಸಿಪ್‌ಗಳಿಗೂ ಉತ್ತರ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಜಗತ್ತಿನ ಖ್ಯಾತ ನಟ, ನಟಿಯರು, ಮಾಡೆಲ್‌ಗಳು ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಾರೆ. ವಾರಗಳ ಕಾಲ ನಡೆಯುವ ಈ ಉತ್ಸವದ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುವುದು ಸೆಲೆಬ್ರೆಟಿಗಳಿಗೆ ಒಂದು ಆಸೆಯಾಗಿರುತ್ತದೆ. ಐಶ್ವರ್ಯಾ ಅವರ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಅವರು ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

(ಏಜೆನ್ಸೀಸ್)

ನಟಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್​ನಲ್ಲಿ ಕಾನ್ಸ್ ರೆಡ್-ಕಾರ್ಪೆಟ್ ಲುಕ್‌ನ ಒಂದು ನೋಟವನ್ನು ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ. ಪೋಸ್ಟ್ ನೋಡಿದ ಅಭಿಮಾನಿಗಳು ಸಾವಿರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ಯಾರೂ ನಿಜವಾಗಿಯೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ, ರಾಣಿ ಯಾವಾಗಲೂ ರಾಣಿ, ಕಿರೀಟ ಇದ್ದರೂ ಇಲ್ಲದಿದ್ದರೂ ಪರವಾಗಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಕ್ವೀನ್ ಆಫ್ ಕೇನ್ಸ್ ನೀವು ಯಾವಾಗಲೂ ಅದ್ಭುತವಾಗಿ ಕಾಣುತ್ತಿದ್ದೀರಿ ಎಂದು ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net