

ಮುಂಬೈ: ಕಾನ್ ಉತ್ಸವದ ಬಳಿಕ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.
ವಿಶ್ವದ ಅತ್ಯಂತ ಸುಂದರ ಮಹಿಳೆಯರಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಐಶ್ವರ್ಯಾ ರೈ ಇತ್ತೀಚೆಗೆ ಅವರು ಧರಿಸುವ ಬಟ್ಟೆಗಳು ಹಾಗೂ ಮೇಕಪ್ ಬಗ್ಗೆ ಭಾರೀ ಟೀಕೆಗೆ ಗುರಿಯಾಗುತ್ತಿದ್ದಾರೆ.
ಗುರುವಾರ ನಡೆದ ಮುಂಬೈನ ವೈದ್ಯರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಐಶ್ವರ್ಯಾ ರೈ ಅವರು ಧರಿಸಿ ಬಂದಿದ್ದ ಬಟ್ಟೆಯಿಂದಾಗಿ ಮತ್ತೆ ಟ್ರೋಲ್ಗೊಳಗಾಗಿದ್ದಾರೆ. ಬಿಳಿ ಬಣ್ಣದ ಉದ್ದದ ಕುರ್ತಾ ಧರಿಸಿ, ಗಾಢ ಕೆಂಪು ಬಣ್ಣದ ಲಿಪ್ಸ್ಟಿಕ್ ಹಚ್ಚಿ, ತಮ್ಮ ಕೂದಲನ್ನು ಎರಡೂ ಕಡೆ ಇಳೆಬಿಟ್ಟಿದ್ದರು. ಆದರೆ ಇವರ ಈ ವೇಷ ಮಾತ್ರ ಅವರ ಅಭಿಮಾನಿಗಳಿಗೆ ಹಿಡಿಸಿಲ್ಲ.
ಕೆಲವು ವರ್ಷಗಳಿಂದ ಒಂದೇ ಹೇರ್ಸ್ಟೈಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದೀರಾ, ಇದು ನಿಮಗೆ ಹಿಡಿಸುತ್ತಿಲ್ಲ, ದಯವಿಟ್ಟು ನಿಮ್ಮ ಹೇರ್ಸ್ಟೈಲ್ ಚೇಂಜ್ ಮಾಡಿ, ಎಂದು ಒಬ್ಬ ಅಭಿಮಾನಿ ಮನವಿ ಮಾಡಿಕೊಂಡಿದ್ದು, ನಿಮ್ಮ ಬಟ್ಟೆ ವಿನ್ಯಾಸ ಕೂಡ ಚೆನ್ನಾಗಿಲ್ಲ, ದಯವಿಟ್ಟು ಅವರನ್ನೂ ಬದಲಾಯಿಸಿಬಿಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)