

ಮುಂಬೈ: ಕಳೆದ ಕೆಲವು ತಿಂಗಳಿಂದ ಬಾಲಿವುಡ್ ಚೆಲುವೆ, ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ನಟ ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿಯೊಂದು ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿಂದೆಯೂ ಇದರ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿತ್ತು. ಆದ್ರೆ, ಈಗ ಮತ್ತೊಮ್ಮೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಅಭಿಷೇಕ್ ಮತ್ತು ಐಶ್ವರ್ಯ ಇಬ್ಬರೂ ಡಿವೋರ್ಸ್ ಕುರಿತು ಶೀಘ್ರವೇ ಮೌನ ಮುರಿಯಲಿದ್ದಾರೆ ಎಂದೆಲ್ಲಾ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಈ ವದಂತಿಗಳಿಗೆ ಸ್ಟಾರ್ ದಂಪತಿ ಯಾವುದೇ ರೀತಿಯಲ್ಲಿಯೂ ಪ್ರತಿಕ್ರಿಯಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ: ನನ್ನಿಂದ ಯಾವುದೇ ಲೋಪವಾಗಿಲ್ಲ…!
ಕೆಲವು ಹದ್ದಿನ ಕಣ್ಣಿನ ಅಭಿಮಾನಿಗಳು ಇಬ್ಬರ ನಡುವೆ ನಿಖರವಾಗಿ ಏನು ತಪ್ಪಾಗಿದೆ? ಇವರಿಬ್ಬರು ಏಕೆ ವಿಚ್ಛೇದನ ಮೊರೆ ಹೋಗಲು ಬಯಸುತ್ತಾರೆ ಎಂಬುದರ ಕುರಿತು ಸುಳಿವುಗಳನ್ನು ಹುಡುಕುತ್ತಿದ್ದಾರೆ. ಅಸಲಿಗೆ ಡಿವೋರ್ಸ್ ವಿಚಾರ ತೀವ್ರ ಚರ್ಚೆಯಾಗಲು ಕಾರಣ ಅಭಿಷೇಕ್ ಬಚ್ಚನ್! ಹೌದು, ಕೆಲವು ದಿನಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಭಾರೀ ಚರ್ಚೆಯಾಗುತ್ತಿದ್ದ 'ಗ್ರೇ ಡಿವೋರ್ಸ್' ಪೋಸ್ಟ್ಗೆ ನಟ ಲೈಕ್ ಕೊಟ್ಟಿದ್ದರು. ಇದನ್ನು ಗಮನಿಸಿದ ನೆಟ್ಟಿಗರು ನಟ ವಿಚ್ಛೇದನ ಕೊಡಲು ಬಯಸಿದ್ದಾರೆ ಎಂಬಂತೆ ತೋರುತ್ತಿದೆ ಎಂದು ಊಹಿಸಿ, ಈ ವದಂತಿಗೆ ಪುಷ್ಟಿ ನೀಡಿದರು. ಇದು ಮತ್ತಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತು.
ಇದೆಲ್ಲದರ ನಡುವೆಯೇ ಇದೀಗ ದುಬೈ ವಿಮಾನ ನಿಲ್ದಾಣದಲ್ಲಿ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ಚರ್ಯ ಬಚ್ಚನ್ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ತಮ್ಮಿಬ್ಬರ ಮಧ್ಯೆ ಯಾವುದೇ ತೊಂದರೆ ಇಲ್ಲ ಎಂಬಂತೆ ಇಬ್ಬರು ಏರ್ಪೋರ್ಟ್ನಿಂದ ಹೊರಬಂದಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ತಮ್ಮ ಮಗಳು ಆರಾಧ್ಯ ಜತೆ ದಂಪತಿ ದುಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಬಗ್ಗೆ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).