ವಿಮಾನ ನಿಲ್ದಾಣದಲ್ಲಿ ಬೆಂಕಿ: ಧಗಧಗನೆ ಉರಿದ ಏರ್​ ಇಂಡಿಯಾ ಬಸ್​ Delhi Airport

untitled-design-34-69008fdc1f0d7
Published on

ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ (Delhi Airport) ಟರ್ಮಿನಲ್ 3ರ ಬಳಿ ನಿಲ್ಲಿಸಿದ್ದ ಏರ್ ಇಂಡಿಯಾ ಬಸ್​ ಮಂಗಳವಾರ (ಅ.28) ಬೆಂಕಿಗಾಹುತಿಯಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಸ್​ ಹೊತ್ತಿ ಉರಿಯುತ್ತಿರುವಂತಹ ಸಮಯದಲ್ಲಿ ವಿಮಾನವು ಹತ್ತಿರದಲ್ಲಿಯೇ ಇತ್ತು. ಈ ಸಮಯದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಹಾಗೂ ಯಾವುದೇ ರೀತಿಯ ಹಾನಿಗಳಾಗಿಲ್ಲ ಎಂದು ಉಪ ಪೊಲೀಸ್​ ಆಯುಕ್ತ ವಿಚಿತ್ರ ವೀರ್​ ಹೇಳಿದ್ದಾರೆ.

ಇದನ್ನೂ ಓದಿ: ಪರಿಹಾರ ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಸಿ, ಅಧಿಕಾರಿಗಳಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಸೂಚನೆ ವಿಮಾನ ನಿಲ್ದಾಣದ ಅಧಿಕಾರಿಗಳು ಬಸ್​ಗೆ ಬೆಂಕಿಯ ಹತ್ತಿಕೊಳ್ಳಲು ಕಾರಣ ಏನೆಂಬುದನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಏರ್ ಇಂಡಿಯಾ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಇನ್ನು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಡಿಐಎಎಲ್) ಇದನ್ನು "ಅಸಹಜ ಘಟನೆ" ಎಂದು ತಿಳಿಸಿದೆ.

ಪೋಸ್ಟ್​ನಲ್ಲೇನಿದೆ?​

ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಸ್​ಗೆ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಘಟನೆ ನಡೆದ ಸಮಯದಲ್ಲಿ ಬಸ್​ನಲ್ಲಿ ಪ್ರಯಾಣಿಕರಿರಲಿಲ್ಲ. ಯಾವುದೇ ರೀತಿಯ ಗಾಯಗಳು ಅಥವಾ ಸಾವು ಸಂಭವಿಸಿಲ್ಲ ಎಲ್ಲಾ ಕಾರ್ಯಾಚರಣೆಗಳು ಸಾಮಾನ್ಯವಾಗಿದೆ. ನಮ್ಮ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆ ಅತ್ಯುನ್ನತವಾಗಿದೆ ಎಂದು ವಿಮಾನ ನಿಲ್ದಾಣದ ಅಧೀಕೃತ (X) ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಪೊಲೀಸರ ಪ್ರಕಾರ, ವಿಮಾನ ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರನ್ನು ಸಾಗಿಸಲು ಬಳಸಲಾಗುತ್ತಿದ್ದ ವಾಹನಕ್ಕೆ ಹಾನಿಯಾಗಿದೆ. ಬಳಿಕ ಮುನ್ನಚ್ಚರಿಕೆ ಕ್ರಮವಾಗಿ ಪೀಡಿತ ಪ್ರದೇಶವನ್ನು ಸ್ವಲ್ಪ ಸಮಯದವರೆಗೆ ಸುತ್ತುವರಿಯಲಾಗಿದೆ ಎಂದು ತಿಳಿಸಿದರು.

ಹಿನ್ನಲೆ

ದೆಹಲಿ ವಿಮಾನ ನಿಲ್ದಾಣವು 3 ಟರ್ಮಿನಲ್‌ಗಳು ಮತ್ತು 4 ರನ್‌ವೇಗಳನ್ನು ಹೊಂದಿದ್ದು, ಇದು ವಾರ್ಷಿಕವಾಗಿ 100 ಮಿಲಿಯನ್‌ಗಿಂತಲೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುತ್ತದೆ. 2010 ರಲ್ಲಿ ಉದ್ಘಾಟನೆಯಾದ ಟರ್ಮಿನಲ್​ 3 ವಿಶ್ವದ ಅತಿದೊಡ್ಡ ಟರ್ಮಿನಲ್‌ಗಳಲ್ಲಿ ಒಂದಾಗಿದ್ದು, ಪ್ರತಿ ವರ್ಷ 40 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಾಮರ್ಥ್ಯವನ್ನು ಹೊಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net