

ರಾಣೆಬೆನ್ನೂರ: ತಾಲೂಕಿನ ಐರಣಿ ಹೊಳೆಮಠದಲ್ಲಿ ಫೆ. 8ರಿಂದ 10ರ ವರೆಗೆ ಪಟ್ಟಾಭಿಷೇಕ ಮಹೋತ್ಸವ, ತುಲಾಭಾರ ಹಾಗೂ ಧರ್ಮಸಭೆ ಕಾರ್ಯಕ್ರಮ ಜರುಗಲಿವೆ.
ಫೆ. 8ರಂದು ಬೆಳಗ್ಗೆ 6.30ಕ್ಕೆ ಸಿದ್ಧಾರೂಢ ಮಂಟಪ ಹಾಗೂ ಮುಪ್ಪಿನಾರ್ಯ ಮಹಾತ್ಮಿಜಿಯವರ ವೇದಿಕೆ ಮಂಟಪ ಪೂಜೆಯೊಂದಿಗೆ ಅಖಂಡ ಶಿವ ಭಜನೆ ಪ್ರಾರಂಭ, 10.30ಕ್ಕೆ ಹಾಗೂ ಸಂಜೆ 4 ಗಂಟೆಗೆ ತುಲಾಭಾರ, 6 ಗಂಟೆಗೆ ಧರ್ಮಸಭೆ, ಸಾಂಸತಿಕ ಕಾರ್ಯಕ್ರಮ ನಡೆಯಲಿವೆ.
ಫೆ. 9ರಂದು ಬೆಳಗ್ಗೆ 10.30 ಹಾಗೂ ಸಂಜೆ 4 ಗಂಟೆಗೆ ತುಲಾಭಾರ, 6 ಗಂಟೆಗೆ ಧರ್ಮಸಭೆ, ಸಾಂಸತಿಕ ಕಾರ್ಯಕ್ರಮ ಹಾಗೂ ಹುಬ್ಬಳ್ಳಿಯಿಂದ ಆಗಮಿಸುವ ಸಿದ್ಧಾರೂಢರ ಜ್ಯೋತಿ ರಥಯಾತ್ರೆಗೆ ಸ್ವಾಗತಿಸಲಾಗುವುದು. ಫೆ. 10ರಂದು ಬೆಳಗ್ಗೆ 10.30ಕ್ಕೆ ಧರ್ಮಸಭೆ ಜರುಗಲಿದ್ದು ಐರಣಿ ಹೊಳೆಮಠದ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಹಾಗೂ ನೂತನ ಪಟ್ಟಾಧ್ಯಕ್ಷ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಇಂಚಲ ಶಿವಯೋಗಿ ಸಾಧು ಸಂಸ್ಥಾನಮಠದ ಜಗದ್ಗುರು ಶಿವಾನಂದ ಭಾರತಿ ಸ್ವಾಮೀಜಿ, ಬೀದರ ಚಿದಂಬರಾಶ್ರಮ, ಸಿದ್ಧಾರೂಢಮಠದ ಜಗದ್ಗುರು ಶಿವಕುಮಾರ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಸಮ್ಮುಖ ವಹಿಸುವರು. ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ, ಶಿವಮೊಗ್ಗ ಸಂಸದ ಬಿ.ವೈ. ರಾವೇಂದ್ರ, ಸಂಸದ ಜಗದೀಶ ಶೆಟ್ಟರ, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಶಾಸಕರಾದ ಬಿ.ಪಿ. ಹರೀಶ, ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ, ಯಾಸೀರಖಾನ್ ಪಠಾಣ, ಡಿ.ಜಿ. ಶಾಂತನಗೌಡ್ರ ಇನ್ನಿತರರು ಅತಿಥಿಗಳಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.