ಹೀಗಿದೆ ಭಾರತ, ಅಮೆರಿಕ ಮುಖ್ಯಸ್ಥರ ಹೈಟೆಕ್ ವಿಮಾನ: ಮೋದಿ-ಬೈಡೆನ್​ ವಿಮಾನಗಳ ಹೋಲಿಕೆ..!

Biden Modi Flights
Published on

ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ವಿದೇಶ ಪ್ರವಾಸಕ್ಕೆ ಏರ್ ಇಂಡಿಯಾ ಒನ್ ವಿಮಾನ ಬಳಸಿದ್ದಾರೆ. ಈ ಹಿಂದೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಗೆ ಮೀಸಲಾದ ಇಂತಹ ವಿಮಾನ ಇರಲಿಲ್ಲ. ಈಗ 2 ವಿಮಾನಗಳು ಲಭ್ಯ ಇದ್ದು, ಭಾರತೀಯ ವಾಯುಪಡೆಯ ಉಸ್ತುವಾರಿಯಲ್ಲಿದೆ. ಅಮೆರಿಕದ ಅಧ್ಯಕ್ಷರು ಕೂಡ ಅತ್ಯಾಧುನಿಕ, ಸುರಕ್ಷಿತ ವಿಮಾನವನ್ನು ಹೊಂದಿದ್ದಾರೆ. ಎರಡೂ ಹೈಟೆಕ್ ವಿಮಾನಗಳ ಹೋಲಿಕೆ ಇಲ್ಲಿದೆ...

ಏರ್​ಫೋರ್ಸ್ ಒನ್

ಬೋಯಿಂಗ್ 747-200ಬಿಯ ಒಳಭಾಗ ಹೀಗಿದೆ: ಸಂವಹನದ ಕೊಠಡಿ - 386 ಕಿ.ಮೀ. ಉದ್ದದ ವಯರಿಂಗ್ ಹೊಂದಿರುವ ಈ ಕೊಠಡಿ ಅಣ್ವಸ್ತ್ರ ಸ್ಪೋಟದ

ತೀವ್ರತೆಯನ್ನು ತಾಳಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಧ್ಯಕ್ಷರ ಕಚೇರಿ, ಕಾಕ್​ಪಿಟ್, ಆಗಸದಲ್ಲೇ ವಿಮಾನಕ್ಕೆ ಇಂಧನ ತುಂಬುವ ಜಾಗ, ಅಧ್ಯಕ್ಷರ ವಿಶ್ರಾಂತಿಕೊಠಡಿ - ಇದರಲ್ಲಿ ಡ್ರೆಸ್ಸಿಂಗ್ ರೂಮ್ ಷವರ್ ಮತ್ತು ಜಿಮ್ ಸೌಲಭ್ಯವೂ ಒಳಗೊಂಡಿದೆ. ರಕ್ತ ನಿಧಿ ಸೇರಿದಂತೆ ಎಲ್ಲ ರೀತಿಯ ವೈದ್ಯಕೀಯ ಸವಲತ್ತುಗಳಿರುವ ಕೊಠಡಿ, ಮುಖ್ಯದ್ವಾರ - ವಿಮಾನ ಭೂಸ್ಪರ್ಶ ಮಾಡಿದ ಬಳಿಕ ಎಡಭಾಗದಲ್ಲಿರುವ ಈ ಬಾಗಿಲು ತೆರೆದುಕೊಳ್ಳುತ್ತದೆ. ಸುರಕ್ಷಾ ದೃಷ್ಟಿಯಿಂದ ಕಚೇರಿ ಬಲಭಾಗದಲ್ಲಿರುತ್ತದೆ. ಅಧ್ಯಕ್ಷರ ರಕ್ಷಣಾ ಪಡೆ, ಹಿರಿಯ ಅಧಿಕಾರಿಗಳ ಸಭಾ ಕೊಠಡಿ, ರೆಕ್ಕೆಗಳಲ್ಲಿ ಹುದುಗಿರುವ ಮಿರರ್​ಬಾಲ್​ಗಳಲ್ಲಿ ಇನ್​ಫ್ರಾ ರೆಡ್ ಮಾರ್ಗದರ್ಶಕ ವ್ಯವಸ್ಥೆ ಇದೆ.

ಪ್ರತಿ ರಕ್ಷಣಾ ವ್ಯವಸ್ಥೆ

ಶತ್ರುಗಳ ಕ್ಷಿಪಣಿಗಳ ದಿಕ್ಕು ತಪ್ಪಿಸುವಂತಹ ಕಿರಣಗಳನ್ನು ಹೊರಸೂಸುವ ಉಪಕರಣ, ಭೂಮಿ ಮೇಲೆ ಅಣ್ವಸ್ತ್ರ ಸ್ಪೋಟಗೊಂಡರೂ ಅದನ್ನು ತಾಳಿಕೊಂಡು ಪಾರಾಗಬಲ್ಲ ರಕ್ಷಾ ಕವಚ, ಶತ್ರುಗಳ ರಾಡಾರ್ ಹಾಗೂ ಕ್ಷಿಪಣಿಗಳ ಕಣ್ಣುತಪ್ಪಿಸುವಂತಹ ವಿದ್ಯುನ್ಮಾನ ರಕ್ಷಣಾ ವ್ಯವಸ್ಥೆ, ಎಲ್ಲ ಕಿಟಕಿಗಳಿಗೂ ರಕ್ಷಾ ಕವಚ ಹೊಂದಿರುವ ಗಾಜುಗಳಿವೆ. ಕಚೇರಿ ಮತ್ತು ಮಾಧ್ಯಮ ವಿಭಾಗ, ಸಿಬ್ಬಂದಿ/ ಸಚಿವಾಲಯ ವಿಭಾಗ - 85 ಟೆಲಿಫೋನ್​ಗಳು, 19 ಟಿವಿ ಮತ್ತು ಇತರೆ ಸೌಲಭ್ಯ, ಡೈನಿಂಗ್ ರೂಮ್ - 2000 ಜನರಿಗೆ ಊಟ ಸಿದ್ಧಪಡಿಸುವ ಅಡುಗೆಮನೆಯೂ ಇದರಲ್ಲಿದೆ.

ಏರ್ ಇಂಡಿಯಾ ಒನ್

ಈ ವಿಮಾನವು ಅಮೆರಿಕ ಅಧ್ಯಕ್ಷರ ‘ಏರ್ ಫೋರ್ಸ್ ಒನ್’ ರೀತಿಯಲ್ಲೇ ವಿಶೇಷ ಸೌಲಭ್ಯಗಳನ್ನು ಹೊಂದಿದೆ. ಇದು ಬೋಯಿಂಗ್ 777-300ಇಆರ್ ಮಾದರಿಯದಾಗಿದ್ದು, ನಮ್ಮ ದೇಶದ ಅತಿಗಣ್ಯರ ಅನುಕೂಲಕ್ಕೆ ತಕ್ಕಂತೆ ಮಾಡಿಫೈ ಮಾಡಲಾಗಿದೆ.

  • ಹೈ-ಟೆಕ್ ಸಂವಹನ ಸೌಲಭ್ಯ
  • ಗ್ರೆನೇಡ್ ಮತ್ತು ರಾಕೆಟ್ ದಾಳಿಗಳಿಗೆ ಪ್ರತಿರೋಧ
  • ಡಾಜ್ ಚಲನೆ ಸೌಲಭ್ಯ (ಹಿಂದೆ-ಮುಂದೆ ಚಲಿಸಬಹುದಾದ ಸೌಲಭ್ಯ)
  • ಶತ್ರು ರೇಡಾರ್​ಗಳನ್ನು ಜಾಮ್ ಮಾಡುವ ತಂತ್ರಜ್ಞಾನ
  • ಆಂಟಿ-ಮಿಸೈಲ್ ಡಿಫೆನ್ಸ್ ವ್ಯವಸ್ಥೆ 
  • 2,000 ಮಂದಿಗೆ ಪೂರೈಕೆ ಮಾಡಬಹುದಾದ ಆಹಾರ ಸಾಮಗ್ರಿಗಳ ಸಂಗ್ರಹ
  • ಬ್ರಾಡ್​ಬ್ಯಾಂಡ್, ರೇಡಿಯೋ, ಟೆಲಿಕಾಂ ಸಂಪರ್ಕಗಳು
  • ಕಚೇರಿ ಕೆಲಸಗಳಿಗೆ ಉಪ ಕರಣಗಳು
  • 19 ಟಿವಿ ಸೆಟ್​ಗಳು
  • ಪ್ರಧಾನ ಕಚೇರಿ ಮತ್ತು ಮಲಗುವ ಕೋಣೆ
  • 24X7 ವೈದ್ಯರ ಸೇವೆ, ತುರ್ತು ಶಸ್ತ್ರ ಚಿಕಿತ್ಸಾ ಕೊಠಡಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net