

ಕೋಲ್ಕತ: ನಿಯಮಿತ ಕೆಲಸದ ಕೊರತೆಯಿಂದಾಗಿ ಖಿನ್ನತೆಗೆ ಜಾರಿದ ಗಗನಸಖಿಯೊಬ್ಬಳು ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲ್ಕತದಲ್ಲಿ ನಡೆದಿದೆ.
ಮೃತ ಗಗನಸಖಿಯನ್ನು ಡೆಬೊಪ್ರಿಯಾ ಬಿಸ್ವಾಸ್ (27) ಎಂದು ಗುರುತಿಸಲಾಗಿದೆ. ನಾಲ್ಕನೇ ಮಹಡಿಯಿಂದ ಕೆಳಗೆ ಜಿಗಿದು, ಗಂಭೀರವಾಗಿ ಗಾಯಗೊಂಡಿದ್ದ ಡೆಬೊಪ್ರಿಯಾಳನ್ನು ಕೋಲ್ಕತದ ಎಸ್ಎಸ್ಕೆಎಂ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಡೆಬೊಪ್ರಿಯಾ, ಕೋಲ್ಕತ್ತಾದ ಪ್ರಗತಿ ಮೈದಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಮೆಟ್ರೋಪಾಲಿಟನ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿ ತನ್ನ ಸಹೋದರಿಯೊಂದಿಗೆ ನೆಲೆಸಿದ್ದಳು. ಕಳೆದ ಎರಡು ವರ್ಷಗಳಿಂದ ನಿಯಮಿತವಾಗಿ ಕೆಲಸ ಸಿಗುತ್ತಿರಲಿಲ್ಲ. ಇದರಿಂದ ಆಕೆ ಖಿನ್ನತೆಗೆ ಜಾರಿದ್ದಳು. ಇದೀಗ ಅದೇ ನೋವಿನಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾಳೆ. (ಏಜೆನ್ಸೀಸ್)