ಹಾಸ್ಟೆಲ್​ನ 10ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಏಮ್ಸ್​​ನ ಕಿರಿಯ ವೈದ್ಯ...

AMS
Published on

ನವದೆಹಲಿ: ಇಲ್ಲಿನ ಪ್ರತಿಷ್ಠಿತ ಆಲ್​ ಇಂಡಿಯಾ ಇನ್ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ (ಏಮ್ಸ್​)ನ ಕಿರಿಯ ವೈದ್ಯರೋರ್ವರು ಇಂದು ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಸ್ಪತ್ರೆಯ ಹಾಸ್ಟೆಲ್​​ನ 10ನೇ ಮಹಡಿಯಿಂದ ಕೆಳಕ್ಕೆ ಹಾರಿ ಜೀವ ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅನುರಾಗ್​ ಕುಮಾರ್​(25) ಏಮ್ಸ್​ನಲ್ಲಿ ಜ್ಯೂನಿಯರ್​ ಡಾಕ್ಟರ್​ ಆಗಿ ಕೆಲಸ ಮಾಡುತ್ತಿದ್ದರು. ಇಂದು ಸಂಜೆ ಏಕಾಏಕಿ ಹಾಸ್ಟೆಲ್​​ನ 10ನೇ ಫ್ಲೋರ್​​ನಿಂದ ಕೆಳಕ್ಕೆ ಹಾರಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ತಕ್ಷಣ ಆಸ್ಪತ್ರೆ ಒಳಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತಾದರೂ ಜೀವ ಉಳಿಯಲಿಲ್ಲ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ.ಇದನ್ನೂ ಓದಿ: ಕೊವಿಡ್​-19 ಹಾಟ್​​ಸ್ಫಾಟ್​ ಆಗಿದ್ದ ಮುಂಬೈನ ಧಾರಾವಿಯನ್ನು ಪ್ರಶಂಸಿಸಿದ ಡಬ್ಲ್ಯೂಎಚ್​ಒ…!

ಸೈಕಿಯಾಟ್ರಿ ವಿಭಾಗದಲ್ಲಿ ಟ್ರೇನಿಂಗ್ ಪಡೆಯುತ್ತಿದ್ದ ಅನುರಾಗ್​ ಕುಮಾರ್​ ಏಮ್ಸ್​ನ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದರು. ಅವರು ಇತ್ತೀಚೆಗೆ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಅನುರಾಗ್​ ಅವರ ಮೊಬೈಲ್​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೆ 37 ವರ್ಷದ ಪತ್ರಕರ್ತನೋರ್ವ ಏಮ್ಸ್​ನ ನಾಲ್ಕನೇ ಮಹಡಿಯಿಂದ ಹಾರಿ ಸೂಸೈಡ್​ ಮಾಡಿಕೊಂಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net