ಸಿಇಟಿ ಸೀಟ್ ಬ್ಲಾಕಿಂಗ್ ಕಡಿವಾಣಕ್ಕೆ ಎಐ ನಿಗಾ: ಕೆಇಎ ಹೊಸ ಅಸ್ತ್ರ ಪ್ರಯೋಗ

Phone in prasanna
Published on

ಬೆಂಗಳೂರು: ಕಳೆದ ವರ್ಷದ ಸೀಟ್ ಬ್ಲಾಕಿಂಗ್ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೊದಲ ಬಾರಿಗೆ ಸೀಟ್ ಬ್ಲಾಕಿಂಗ್ ತಡೆಗಟ್ಟಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದರು.

ಸಿಇಟಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿರುವ ಗೊಂದಲ, ಅನುಮಾನಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೋಮವಾರ ‘ವಿಜಯವಾಣಿ’ ಕಚೇರಿಯಲ್ಲಿ ಆಯೋಜಿಸಿದ್ದ ೆನ್ ಇನ್ ಕಾರ್ಯಕ್ರಮದಲ್ಲಿ ಸ್ಪಷ್ಟಪಡಿಸಿದರು.

ಕೆಲವು ಖಾಸಗಿ ಕಾಲೇಜುಗಳು, ಸೈಬರ್ ಸೆಂಟರ್ ಮತ್ತು ಅಭ್ಯರ್ಥಿಗಳ ಕೈವಾಡದಿಂದ ಸೀಟ್ ಬ್ಲಾಕಿಂಗ್ ನಡೆಯಲಿದೆ. ಎಲ್ಲ ಆಯಾಮಗಳಿಂದ ಈ ಬಾರಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕಡಿವಾಣ ಹಾಕಲಾಗುತ್ತಿದೆ ಎಂದರು.

ಸಿಇಟಿ ಜತೆಜತೆಗೆ ಎನ್‌ಐಟಿ ಮತ್ತು ಐಐಟಿಗಳಲ್ಲಿ ಪ್ರವೇಶಾತಿಗೆ ಕೌನ್ಸೆಲಿಂಗ್‌ನಲ್ಲಿ ಎನ್‌ಟಿಎನಲ್ಲಿ ಪಾಲ್ಗೊಳ್ಳುವ ಜೆಇಇ ಅಭ್ಯರ್ಥಿಗಳು, ವೈದ್ಯಕೀಯ ಕೋರ್ಸ್‌ಗಳಿಗೆ ಸೇರಲು ರಾಷ್ಟ್ರೀಯ ವೈದ್ಯಕೀಯ ಪರಿಷತ್ತು (ಎನ್‌ಎಂಸಿ) ಕೌನ್ಸೆಲಿಂಗ್ ಪ್ರಕ್ರಿಯೆಗಳ ಮೇಲೆಯೂ ನಿಗಾ ವಹಿಸಲಾಗುತ್ತಿದೆ. ವಿದ್ಯಾರ್ಥಿಗಳು ಜೆಇಇ/ನೀಟ್‌ನಲ್ಲಿ ಸೀಟು ಪಡೆದ ನಂತರ ಸಿಇಟಿಯಲ್ಲಿ ಸೀಟು ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಅಂತಹ ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲಾಗುತ್ತದೆ ಎಂದು ಹೇಳಿದರು.

ಮೂರನೇ ಮುಂದುವರಿದ ಸುತ್ತಿನಲ್ಲಿಯೂ ಸೀಟು ಹಂಚಿಕೆ

ಕೆಇಎ ನಡೆಸುವ ಎರಡನೇ ಮುಂದುವರಿದ ಸುತ್ತಿನ ನಂತರ ಉಳಿದ ಸೀಟುಗಳನ್ನು ಖಾಸಗಿ ಕಾಲೇಜುಗಳಿಗೆ ಮರಳಿಸಲಾಗುತ್ತದೆ. ಅಂತಹ ಸಮಯದಲ್ಲಿ ಖಾಸಗಿ ಕಾಲೇಜುಗಳಲ್ಲಿ ಸೀಟುಗಳನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡಿಕೊಳ್ಳುವ ಬಗ್ಗೆಯೂ ದೂರುಗಳಿವೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವುದಕ್ಕಾಗಿ ಮೂರು ಹಾಗೂ ಮುಂದುವರಿದ ಸುತ್ತಿನಲ್ಲಿಯೂ ಸೀಟು ಹಂಚಿಕೆ ಮಾಡಲಾಗುತ್ತದೆ. ಸೀಟು ಹಂಚಿಕೆ ಮಾಡಲು ಎಐಸಿಟಿಇ ನೀಡಿರುವ ಕೊನೆಯ ದಿನ ಮುಗಿದ ನಂತರದ 10 ದಿನಗಳ ವರೆಗೂ ಸೀಟು ಹಂಚಿಕೆ ಮಾಡಲಾಗುತ್ತದೆ. ಹೀಗೆ ಹತ್ತಾರು ಕ್ರಮಗಳ ಮೂಲಕ ಸೀಟು ಬ್ಲಾಕಿಂಗ್ ಪ್ರಕರಣಗಳನ್ನು ತಪ್ಪಿಸಲು ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

ಅರ್ಜಿ ನೋಂದಣಿಯಿಂದ ಕಾಲೇಜು ಪ್ರವೇಶದತನಕ ನಿಗಾ

ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ಹಾಗೂ ಪರೀಕ್ಷೆ ಬರೆದವರು ಒಬ್ಬರು, ಕಾಲೇಜಿಗೆ ಸೇರುವವರು ಮತ್ತೊಬ್ಬರು ಆಗುವುದನ್ನು ಕೂಡ ತಪ್ಪಿಸಲು ಈ ಬಾರಿ ಸುಧಾರಿತ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅರ್ಜಿ ಸಲ್ಲಿಸುವ ವೇಳೆ ಪಡೆಯುವ ೆಟೋ ಆಧಾರದಲ್ಲಿ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರದಲ್ಲಿ ಆೃಪ್‌ಮೂಲಕ ವಿದ್ಯಾರ್ಥಿಯ ಮುಖ ಚಹರೆ (ೇಸ್ ರೆಕಾಗ್ನಿಷನ್)ಯನ್ನು ಹಾಗೂ ಆೃಪ್ ಮೂಲಕ ಕ್ಯೂಆರ್ ಕೋಡ್‌ನಲ್ಲಿ ಖಾತ್ರಿ ಪಡಿಸಿಕೊಂಡ ಬಳಿಕವೇ ವಿದ್ಯಾರ್ಥಿಗೆ ಪ್ರವೇಶ ನೀಡಲಾಗುತ್ತಿದೆ. ಇದೇ ತಂತ್ರಜ್ಞಾನವನ್ನು ಅರ್ಜಿ ಸಲ್ಲಿಸಿದ ದಿನದಿಂದ ಕಾಲೇಜಿನಲ್ಲಿ ಪ್ರವೇಶ ಪಡೆಯುವ ತನಕ ಅನ್ವಯ ಮಾಡಲಾಗುತ್ತದೆ. ಕಾಲೇಜು ಪ್ರವೇಶ ಪಡೆಯುವ ವೇಳೆ ಪ್ರಾಂಶುಪಾಲರಿಗೂ ಒಟಿಪಿ ಕಳುಹಿಸಿ ಪರಿಶೀಲನೆ ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸುವ ವೇಳೆ ಇದ್ದ ಮುಖಕ್ಕೂ ಕಾಲೇಜಿಗೆ ಪ್ರವೇಶ ಪಡೆದ ಅಭ್ಯರ್ಥಿಗೂ ವ್ಯತ್ಯಾಸವಾದಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಆತಂಕ ಬೇಡ, ಪಿಯು ಪರೀಕ್ಷೆ-2 ಲಿತಾಂಶವನ್ನು ಸಿಇಟಿಗೆ ಪರಿಗಣನೆ

ಕಳೆದ ವರ್ಷದಿಂದಲೇ ಈ ನಿಯಮ ಜಾರಿಯಲ್ಲಿದ್ದರೂ ಹೆಚ್ದಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆಯ ಅಂಕಗಳನ್ನು ಸಿಇಟಿಗೆ ಪರಿಗಣಿಸುತ್ತಾರೋ ಇಲ್ಲವೋ ಎಂಬ ಗೊಂದಲವಿದೆ. ೆನ್ ಇನ್‌ನಲ್ಲಿಯೂ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ದುಗುಡವನ್ನು ತೋಡಿಕೊಂಡರು. ಇದಕ್ಕೆ ಅಭಯ ನೀಡಿದ ಪ್ರಸನ್ನ, ಎರಡು ಪರೀಕ್ಷೆಗಳಲ್ಲಿ ವಿಷಯವಾರು ಯಾವುದರಲ್ಲಿ ಹೆಚ್ಚಿರುತ್ತದೆಯೋ ಅದನ್ನೇ ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಗಳು ಆತಂಕ ಪಡುವುದು ಬೇಡ. ಪರೀಕ್ಷೆ ಬರೆಯುವುದರ ಮೇಲೆ ಗಮನ ಹರಿಸುವಂತೆ ಸಲಹೆ ನೀಡಿದರು.

ಪರೀಕ್ಷಾ ಅಕ್ರಮ, ನಕಲು ಅಭ್ಯರ್ಥಿಗಳು ಮತ್ತು ಸೀಟ್ ಬ್ಲಾಕಿಂಗ್ ಪ್ರಕರಣಗಳಿಗೆ ಕಡಿವಾಣ ಹಾಕಲು ಕೆಇಎ ಸಾಕಷ್ಟು ಆಯಾಮಗಳನ್ನು ಚರ್ಚಿಸಿ ಸುಧಾರಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ನಿಶ್ಚಿಂತೆಯಿಂದ ಪರೀಕ್ಷೆ ಬರೆಯಬಹುದು. ಪರೀಕ್ಷಾ ಅಕ್ರಮದ ಮೇಲೆ ಆತಂಕ ಪಡುವ ಬದಲು ಹೆಚ್ದು ಅಂಕ ಪಡೆಯುವತ್ತ ವಿದ್ಯಾರ್ಥಿಗಳು ಗಮನ ಹರಿಸುವುದು ಸೂಕ್ತ. - ಎಚ್. ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net