ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿ AI, ಡೀಪ್‌ಟೆಕ್‌ ಮಾರ್ಗದರ್ಶನ; ಮಾಜಿ ಸಚಿವರ ಟ್ವೀಟ್​ಗೆ ಭರ್ಜರಿ ರೆಸ್ಪಾನ್ಸ್​

Rajeev Chandrashekar
Published on

ನವದೆಹಲಿ: ಡೀಪ್‌ಟೆಕ್‌ನಲ್ಲಿ ಕೆಲಸ ಮಾಡುವ ಭಾರತೀಯರಿಗೆ ಮಾರ್ಗದರ್ಶನ ನೀಡುವ ಮೂಲಕ, AI ಡೊಮೇನ್‌ಗಳು, ಸ್ಟಾರ್ಟ್‌ಅಪ್‌ಗಳು ಸೇರಿದಂತೆ ವಿವಿಧ ಉದ್ಯಮಿಗಳನ್ನು ಟ್ವೀಟ್ ಮೂಲಕ ಸೆಳೆಯುವಲ್ಲಿ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಯಶಸ್ವಿಯಾಗಿದ್ದಾರೆ. 

ಈ ಬಗ್ಗೆ ಮಾತನಾಡಿರುವ ರಾಜೀವ್ ಚಂದ್ರಶೇಖರ್, ಉದಯೋನ್ಮುಖ ಕ್ಷೇತ್ರಗಳಾದ ಹಾಗೂ ಇಂದಿನ ಜಗತ್ತಿನಲ್ಲಿ ಅತಿ ಅವಶ್ಯಕವಾದ ಕೃತಕ ಬುದ್ಧಿಮತ್ತೆ ಹಾಗೂ ಡೀಪ್‌ಟೆಕ್‌ ವಿಷಯಗಳಲ್ಲಿ ಭಾರತೀಯರಿಗೆ ಮಾರ್ಗದರ್ಶನ ಮಾಡಲು ಮಾಜಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಮುಂದಾಗಿದ್ದು, ಅದಕ್ಕೆ ಕೇವಲ 3 ದಿನದಲ್ಲಿ ಭರ್ಜರಿ ಪ್ರತಿಕ್ರಿಯೆ ಲಭಿಸಿದೆ. 1300 ಜನ ಮಾರ್ಗದರ್ಶನ ನೀಡಲು ಸಜ್ಜಾಗಿದ್ದಾರೆ.

ಈ ಮಟ್ಟದ ಪ್ರತಿಕ್ರಿಯೆ ನೋಡಿ ನಾನು ದಂಗಾದೆ. ನೀವು ಈ ತಂತ್ರಜ್ಞಾನಗಳ ಭವಿಷ್ಯವನ್ನು ರೂಪಿಸಬಲ್ಲಿರಿ ಎಂಬ ವಿಶ್ವಾಸ ನನಗಿದೆ’ ಎಂದಿದ್ದಾರೆ. ಜೊತೆಗೆ, ‘ಕೆಲವೇ ದಿನಗಳ ಸಮಯಾವಕಾಶ ಸಿಕ್ಕಿದರೆ ಇದಕ್ಕೆ ಪೂರಕವಾಗಿ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುತ್ತೇನೆ ಹಾಗೂ ನಿಮ್ಮೆಲ್ಲರ ಕಲ್ಪನೆ ಹಾಗೂ ಗುರಿಗಳಿಗೆ ರೆಕ್ಕೆ ಕೊಡುವ ಕೆಲಸ ಮಾಡುತ್ತೇನೆ. ಭಾರತ ಮತ್ತು ನಮ್ಮ ಡಿಜಿಟಲ್ ಮತ್ತು ನಾವೀನ್ಯತೆಯ ಆರ್ಥಿಕತೆಯನ್ನು ಯಶಸ್ವಿಯಾಗುವಂತೆ ಮಾಡುವುದೇ ನನ್ನ ಧ್ಯೇಯವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net