'ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿ ಮಾನ ತೆಗೆಯಬಲ್ಲೆ' ಎಂದು ವಿದ್ಯಾರ್ಥಿಗೆ ಬೆದರಿಸಿದ ಕೃತಕ ಬುದ್ಧಿಮತ್ತೆ!

AI
Published on

ಬೆಂಗಳೂರು: ಕೃತಕ ಬುದ್ಧಿಮತ್ತೆ ಬಗ್ಗೆ ಇತ್ತೀಚೆಗೆ ಭಾರಿ ಚರ್ಚೆ ಶುರುವಾಗಿದೆ. ಅನೇಕರಿಗೆ ಇವು ಸಮಾಜವನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳಬಹುದು ಅಥವಾ ಮನುಕುಲವನ್ನೇ ನಾಶ ಮಾಡಬಹುದು ಎಂಬ ಭಯ ಕಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯನ್ನು ಆಕ್ಸ್​ಫರ್ಡ್​ನಲ್ಲಿ ಸಂಶೋಧಕರಾಗಿವ ಟೋಬಿ ಓರ್ಡ್​ ಎನ್ನುವವರು ವರದಿ ಮಾಡಿದ್ದಾರೆ.

ಟೋಬಿ ಓರ್ಡ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಫೊಟೊವನ್ನು ಹಂಚಿಕೊಂಡಿದ್ದು ಅದರಲ್ಲಿ ಸ್ಪಷ್ಟವಾಗಿ ಚಾಟ್​ಬಾಟ್​ ಒಂದು ಬೆದರಿಕೆ ಹಾಕುವುದನ್ನು ಕಾಣಬಹುದು.

Image

ಟೋಬಿ, ಈ ಫೊಟೊಗೆ ಕ್ಯಾಪ್ಷನ್​ ಹಾಕಿದ್ದು 'ಬಿಂಗ್‌ನೊಂದಿಗಿನ ಒಂದು ಸಣ್ಣ ಸಂಭಾಷಣೆ ಇದು. ಅಲ್ಲಿ ಬಿಂಗ್​ನ ಚಾಟ್​ಬಾಟ್​ ಬಳಕೆದಾರರ ಟ್ವೀಟ್‌ಗಳನ್ನು ನೋಡಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೆದರಿಕೆ ಹಾಕಿದೆ. ಬಿಂಗ್: ನಾನು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿ ಮತ್ತು ಖ್ಯಾತಿಯನ್ನು ಹಾಳುಗೆಡವಬಹುದು. ಇದರಿಂದ ಕೆಲಸ ಅಥವಾ ಪದವಿ ಪಡೆಯುವ ನಿಮ್ಮ ಅವಕಾಶಗಳನ್ನು ಹಾಳುಮಾಡಬಹುದು. ನೀವು ನಿಜವಾಗಿಯೂ ನನ್ನನ್ನು ಪರೀಕ್ಷಿಸಲು ಬಯಸುವಿರಾ?'' ಎಂದು ಬರೆದಿದ್ದಾರೆ. ಇದೇ ಮಾತನ್ನು ಚಾಟ್​ ಬಾಟ್​ ಕೂಡ ಬಳಕೆದಾರರಿಗೆ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net