ನಾಯಿ ಉಗುರು, ಇನ್ಸ್​ಪೆಕ್ಟರ್ ಸಾವು: ರೇಬೀಸ್ ಸೋಂಕಿನ ಭಯಂಕರ ಕಥೆ! | Rabies

untitled-design-2025-09-23t152549264-68d26eb84766c
Published on

Rabies: ಅಹಮದಾಬಾದ್​ನ ನಗರ ನಿಯಂತ್ರಣ ಕೊಠಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ರೇಬೀಸ್‌ನಿಂದ ಮೃತಪಟ್ಟಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ.

ವರದಿಗಳ ಪ್ರಕಾರ, ಮಂಜರಿಯಾ ಅವರ ಸಾಕುಪ್ರಾಣಿ ಜರ್ಮನ್ ಶೆಫರ್ಡ್‌ನ ಉಗುರು ಗೀರುಗಳಿಂದ ರೇಬೀಸ್ ಸೋಂಕು ಉಂಟಾಗಿದೆ ಎಂದು ಹೇಳಿವೆ. ಈ ವರದಿಗೆ ಸಂಬಂಧಿಸಿದಂತೆ ವೈದ್ಯಕೀಯ ತಜ್ಞರು ಇಂತಹ ಪ್ರಸರಣ ವಿಧಾನವು ತುಂಬಾ ಅಸಂಭವವಾಗಿದ್ದು, ಘಟನೆಯನ್ನು ತಪ್ಪಾಗಿ ವರದಿ ಮಾಡಿರಬಹುದು ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.

ಒಂದು ಗೀರು ಮಾರಕ ಸೋಂಕಿಗೆ ಕಾರಣವಾಯಿತೇ?

ಸುದ್ದಿಮೂಲಗಳ ಪ್ರಕಾರ, ಮೃತರನ್ನು ಇನ್ಸ್‌ಪೆಕ್ಟರ್ ವನರಾಜ್ ಮಂಜರಿಯಾ ಎಂದು ಗುರುತಿಸಲ್ಪಟ್ಟಿದೆ. ಇವರು ಸುಮಾರು ಐದು ದಿನಗಳ ಹಿಂದೆ ಅವರ ನಾಯಿ ಉಗುರಿನಿಂದ ಗೀರಿತ್ತು. ಆದರೆ ಅವರು ತಕ್ಷಣವೇ ಚಿಕಿತ್ಸೆ ಪಡೆಯಲಿಲ್ಲ. ಈ ಚಿಕ್ಕ ಗಾಯ ರೇಬಿಸ್​ಗೆ ತಿರುಗಿತು. ನಂತರ ಇವರು ಕೆಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವಾರು ದಿನಗಳ ಕಾಲ ಚಿಕಿತ್ಸೆ ಪಡೆದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ರೇಬೀಸ್ ರೋಗವು ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ನರವೈಜ್ಞಾನಿಕ ಕುಸಿತಕ್ಕೆ ಕಾರಣವಾಗುತ್ತದೆ. ರೋಗಿಗಳಿಗೆ ಸ್ವಯಂ-ಹಾನಿಯನ್ನು ತಡೆಗಟ್ಟಲು ದೈಹಿಕ ಸಂಯಮದ ಅಗತ್ಯವಿರುತ್ತದೆ. ಆದರೆ, ಕೊನೆಯ ಸಮಯದಲ್ಲಿ ಈ ವೈರಸ್​ ಮಂಜರಿಯಾ ಅವರ ಮೆದುಳಿನ ಮೇಲೆ ತೀವ್ರ ಪರಿಣಾಮ ಬೀರಿರುವುದರಿಂದ ಅವರನ್ನು ಹಾಸಿಗೆಗೆ ಕಟ್ಟಿಹಾಕಲಾಗಿತ್ತು ಎಂದು ಅಧಿಕಾರಿಗಳು ಹಂಚಿಕೊಂಡಿದ್ದಾರೆ.

ರೇಬೀಸ್ ಹರಡುವಿಕೆ

ವೈಜ್ಞಾನಿಕ ಅಧ್ಯಯನಗಳು ಮತ್ತು WHO ಪ್ರಕಾರ, ರೇಬೀಸ್ ಹರಡುವಿಕೆಯು ಪ್ರಾಥಮಿಕವಾಗಿ ಸೋಂಕಿತ ಪ್ರಾಣಿಯ ಲಾಲಾರಸದ ಮೂಲಕ ಸಂಭವಿಸುತ್ತದೆ. ಇದು ಹೆಚ್ಚಾಗಿ ಮನುಷ್ಯನನ್ನು ಕಚ್ಚುವ ಮೂಲಕ ಇಲ್ಲವೇ, ಪ್ರಾಣಿಗಳ ಉಗುರುಗಳು ಲಾಲಾರಸದಿಂದ ಕೂಡಿದ್ದರೆ, ಇದು ದೇಹವವನ್ನು ಗೀರಿದಾಗ ರೇಬಿಸ್​ ರೋಗ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net