31ರಂದು ಅಹಿಂದ ಸಮ್ಮಿಲನ-ಚಿಂತನ ಮಂಥನ

ahinda pro h.rachappa
ಹಿಂದುಳಿದ ಜನ ಜಾಗೃತಿ ವೇದಿಕೆ ಗೌರವ ಅಧ್ಯಕ್ಷ ಪ್ರೊ. ಎಚ್.ರಾಚಪ್ಪ
Published on

ಶಿವಮೊಗ್ಗ: ಸಂವಿಧಾನ ಸಂರಕ್ಷಣಾ ದಿನದ ಅಂಗವಾಗಿ ಅಹಿಂದ ಚಳವಳಿ, ಮಿಲಿಂದ ಸಂಘಟನೆ ಹಾಗೂ ಹಿಂದುಳಿದ ಜನಜಾಗೃತಿ ವೇದಿಕೆಯಿಂದ ಜ.31ರಂದು ಬೆಳಗ್ಗೆ 11ಕ್ಕೆ ಪತ್ರಿಕಾ ಭವನದಲ್ಲಿ ಅಹಿಂದ ಸಮ್ಮಿಲನ-ಚಿಂತನ ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಹಿಂದ ರಾಜ್ಯ ಪ್ರಧಾನ ಸಂಚಾಲಕ ಎಸ್.ಮೂರ್ತಿ ಮುಖ್ಯ ಭಾಷಣ ಮಾಡುವರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಆರುಂಡಿ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಗುವುದು ಎಂದು ಹಿಂದುಳಿದ ಜನ ಜಾಗೃತಿ ವೇದಿಕೆ ಗೌರವ ಅಧ್ಯಕ್ಷ ಪ್ರೊ. ಎಚ್.ರಾಚಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವೇದಿಕೆ ಅಧ್ಯಕ್ಷ ತೀ.ನ.ಶ್ರೀನಿವಾಸ್ ಪ್ರಾಸ್ತಾವಿಕ ಭಾಷಣ ಮಾಡುವರು. ಅಹಿಂದ ರಾಜ್ಯ ಜಂಟಿ ಸಂಚಾಲಕ ಮೊಹಮ್ಮದ್ ಸನಾವುಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಪರಮೇಶ್ವರಪ್ಪ, ಮಿಲಿಂದ ಸಂಘಟನೆ ಅಧ್ಯಕ್ಷ ಅಣ್ಣಪ್ಪ ಪಾಲ್ಗೊಳ್ಳುವರು. ಕೇಂದ್ರ ಸಚಿವ ಅಮಿತ್ ಷಾ ಹೇಳಿಕೆ, ಕಾಂತರಾಜ್ ವರದಿ ಜಾರಿ ವಿಳಂಬ, ದೇವರಾಜ ಅರಸು ಭವನ ಕಾಮಗಾರಿ ಮಂದಗತಿಯನ್ನು ವಿರೋಧಿಸಿ ಖಂಡನಾ ನಿರ್ಣಯ ತೆಗೆದುಕೊಳ್ಳಲಾಗುವುದು. ಜತೆಗೆ ಮುಂಬರುವ ಜನಗಣತಿ ವೇಳೆ ಜಾತಿ ಗಣತಿಯನ್ನೂ ಮಾಡಬೇಕು. ಲೋಕಸಭೆ-ವಿಧಾನಸಭೆ ಕ್ಷೇತ್ರಗಳಿಗೂ ರಾಜಕೀಯ ಮೀಸಲಾತಿ ಕಲ್ಪಿಸುವುದು. ಸಾಚಾರ್ ಸಮಿತಿ ವರದಿ ಜಾರಿಗೆ ಒತ್ತಾಯಿಸಲಾಗುವುದು ಎಂದರು. ಪ್ರಮುಖರಾದ ರಾಜಮ್ಮ, ಜನ್ಮೋಜಿರಾವ್, ಚಂದ್ರಪ್ಪ, ನಟರಾಜ್, ಪರಮೇಶ್ವರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net