ಆಗುಂಬೆಯಲ್ಲಿ ಆಸ್ಟ್ರೇಲಿಯಾ ಹೈಕಮಿಶನರ್

17 tth 03 austrelia
ಆಸ್ಟ್ರೇಲಿಯಾದ ಹೈಕಮಿಶನರ್ ಫಿಲಿಪ್ ಗ್ರೀನ್ ಹಾಗೂ ಸಹವರ್ತಿಗಳು ಮೂರು ದಿನಗಳ ಪ್ರವಾಸಕ್ಕೆ ಆಗುಂಬೆಗೆ ಅಗಮಿಸಿದ್ದು ಹಸಿರುಮನೆಯಲ್ಲಿರುವ ಕಾಳಿಂಗ ಫೌಂಡೇಶನ್‌ನಲ್ಲಿ ತಂಗಿದ್ದಾರೆ.
Published on

ತೀರ್ಥಹಳ್ಳಿ: ಆಸ್ಟ್ರೇಲಿಯಾದ ಹೈಕಮಿಶನರ್ ಫಿಲಿಪ್ ಗ್ರೀನ್ ಸೇರಿದಂತೆ ಆಸ್ಟ್ರೇಲಿಯಾದ ನಾಲ್ವರ ತಂಡ ಮೂರು ದಿನಗಳ ಪ್ರವಾಸಕ್ಕೆ ಆಗುಂಬೆಗೆ ಶುಕ್ರವಾರ ಸಂಜೆ ಆಗಮಿಸಿದೆ. ಗುಡ್ಡೆಕೇರಿ ಸಮೀಪದ ಹಸಿರುಮನೆಯಲ್ಲಿರುವ ಚಲನಚಿತ್ರ ನಿರ್ದೇಶಕ ಅಮೋಘವರ್ಷ ನೇತೃತ್ವದ ಕಾಳಿಂಗ ಫೌಂಡೇಶನ್‌ನಲ್ಲಿ ತಂಗಿದ್ದಾರೆ. ಹೈಕಮಿಶನರ್ ಫಿಲಿಪ್ ಗ್ರೀನ್‌ರೊಂದಿಗೆ ಆಸ್ಟ್ರೇಲಿಯಾದ ಕಾನ್ಸುಲೇಟ್ ಹಿಲೇರಿ ಹಾಗೂ ಆಕೆಯ ಇಬ್ಬರು ಮಕ್ಕಳು ಬಂದಿದ್ದು ಭಾನುವಾರದವರೆಗೆ ಇರುತ್ತಾರೆ ಎಂದು ಹೇಳಲಾಗಿದೆ. ಶನಿವಾರ ಇಳಿಮನೆಯಿಂದ ಆಗುಂಬೆವರೆಗೆ ವನ್ಯಜೀವಿ ವಿಭಾಗದಲ್ಲಿ ಟ್ರೆಕ್ಕಿಂಗ್ ನಡೆಸಿದ ಈ ತಂಡ ಕಾಳಿಂಗ ಫೌಂಡೇಶನ್‌ನ ನಿರ್ದೇಶಕ ಡಾ. ಪಿ.ಗೌರಿಶಂಕರ್ ನೇತೃತ್ವದಲ್ಲಿ ನಡೆದಿರುವ ಸಂಶೋಧನೆ ಪರಿಸರ ಹಾಗೂ ಸೂಕ್ಷ್ಮ ವನ್ಯಜೀವಿ ರಕ್ಷಣೆ ಕುರಿತಂತೆ ಮಾಹಿತಿ ಪಡೆದರು. ಹೆಬ್ರಿ ಹಾಗೂ ಅಮಾಸೆಬೈಲು ವನ್ಯಜೀವಿ ವಿಭಾಗದ ಆರ್‌ಎಫ್‌ಒ ಗೌರವ್ ಹಾಗೂ ಸಿಬ್ಬಂದಿ ಈ ತಂಡದ ನೆರವಿಗೆ ನಿಂತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net