ಆದಾಯ ಪ್ರಮಾಣಪತ್ರಕ್ಕೆ ಕೃಷಿ ಇನ್‌ಕಮ್ ಪರಿಗಣನೆ?

VidhanaSoudha
Published on

ಗೋವಿಂದ ರಾಜು ಚಿನ್ನಕುರ್ಚಿ ಬೆಂಗಳೂರು

ಶೈಕ್ಷಣಿಕ ಮತ್ತು ಸರ್ಕಾರಿ ಸೌಲಭ್ಯಕ್ಕೆ ಬಳಸುವ ಆದಾಯ ಪ್ರಮಾಣಪತ್ರ ವಿತರಿಸುವಾಗ ಅರ್ಜಿದಾರನ ಕೃಷಿ ವರಮಾನವನ್ನೂ ಮೌಲ್ಯಮಾಪನ ಮಾಡಿ ಸರ್ಟಿಫಿಕೇಟ್ ನೀಡುವಂತಹ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದಿದೆ.

ಆದಾಯ ಪ್ರಮಾಣಪತ್ರಕ್ಕೆ ನಾಡ ಕಚೇರಿ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಅರ್ಜಿದಾರರು ತಾವೇ ಆದಾಯ ೋಷಣೆ ಮಾಡಿಕೊಳ್ಳುತ್ತಾರೆ. ಈ ವೇಳೆ ಆದಾಯ ತೆರಿಗೆ ಪಾವತಿದಾರರ ದತ್ತಾಂಶವಷ್ಟೇ ಪರಿಗಣಿಸಲಾಗುತ್ತದೆ. ಅದೇ ರೀತಿ ಕೃಷಿ ಆದಾಯದ ಮೌಲ್ಯಮಾಪನ ಮಾಡಿ ಅದರ ಆಧಾರದ ಮೇಲೆ ಪ್ರಮಾಣಪತ್ರ ನೀಡಬೇಕೆಂದು ಸರ್ಕಾರಕ್ಕೆ ಆಡಳಿತ ಸುಧಾರಣಾ ಆಯೋಗ ಶಿಾರಸು ಮಾಡಿದೆ.

ಅರ್ಜಿದಾರನ ಕುಟುಂಬ ಸದಸ್ಯರ ಜಮೀನಿನ ಮಾಹಿತಿ ಭೂಮಿ ತಂತ್ರಾಂಶದಲ್ಲಿ ಪಡೆದು ಬೆಳೆದ ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಪಡೆಯಬಹುದು. ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳು ಒದಗಿಸಿದ ಬೆಳೆ ಕಟಾವಣೆ ಪ್ರಯೋಗಗಳ ದತ್ತಾಂಶ ಬಳಸಿ ಬೆಳೆಗಳ ಇಳುವರಿ ಲೆಕ್ಕ ಹಾಕಿ ಆದಾಯ ನಿರ್ಣಯಿಸಬಹುದು. ಹತ್ತಿರದ ಎಪಿಎಂಸಿ ಮತ್ತು ಇ-ಮಾರುಕಟ್ಟೆಗಳಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಚಾಲ್ತಿಯಲ್ಲಿ ಇರುವ ಮಾರುಕಟ್ಟೆ ಬೆಲೆಗಳನ್ನು ಗ್ರಾಮ ಆಡಳಿತಾಧಿಕಾರಿಗೆ (ವಿಎಒ) ವಾರ್ಷಿಕವಾಗಿ ಅಥವಾ ಋತುಮಾನದಲ್ಲಿ ಸಿದ್ಧ ಲೆಕ್ಕಾಚಾರವಾಗಿ ಲಭ್ಯವಾಗುವಂತೆ ಮಾಡಬೇಕು. ಹೆಚ್ಚುವರಿಯಾಗಿ ಕನಿಷ್ಠ ಬೆಂಬಲ (ಎಂಎಸ್‌ಪಿ) ಮತ್ತು ನ್ಯಾಯೋಚಿತ ಲಾಭದಾಯಕ ಬೆಳೆ (ಎ್ಆರ್‌ಪಿ) ಅಧಿಸೂಚಿತ ಬೆಲೆಗಳನ್ನು ಮಾರುಕಟ್ಟೆ ದರದ ಮಾನದಂಡವಾಗಿ ಬಳಸಿಕೊಳ್ಳಬಹುದು.

ಮೌಲ್ಯಮಾಪನದ ವರ್ಷದಲ್ಲಿ ಬರಗಾಲ ಅಥವಾ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ, ಪಾವತಿಸಿದ ಸಬ್ಸಿಡಿ ಅಥವಾ ಬೆಳೆ ಹಾನಿ ಬೆಳೆ ವಿಮಾ ಹಕ್ಕುಗಳ ದಾಖಲೆ ಬಳಸಿಕೊಳ್ಳಬೇಕು. ಈ ಎಲ್ಲ ಲೆಕ್ಕಾಚಾರದ ಮೌಲ್ಯಮಾಪನ ಆಧಾರದ ಮೇಲೆ ವಿಎಒಗಳು ಕೃಷಿ ಆದಾಯ ನಿರ್ಧರಿಸಬೇಕು. ಕೃಷಿ ಮಾಡಿದ ಭೂಮಿ ವಿಸ್ತೀರ್ಣದ ಆಧಾರದ ಮೇಲೆ ಕೃಷಿ ಆದಾಯ ಪಟ್ಟಿ ಸಿದ್ದಪಡಿಸಬೇಕು. ಅರ್ಜಿದಾರನೇ ಕೃಷಿ ಆದಾಯ ೋಷಿಸಿದ್ದರೇ ನಿರ್ಣಯಿಸಲು ಇದನ್ನು ಆಧಾರವಾಗಿ ಬಳಸಲು ಶಿಾರಸು ಮಾಡಲಾಗಿದೆ.

ವಾಣಿಜ್ಯ ಬೆಳೆ ಮೌಲ್ಯಮಾಪನ

ರಬ್ಬರ್, ಸಾಂಬಾರ್ ಪದಾರ್ಥ, ಅಡಕೆ, ತೆಂಗಿನಕಾಯಿಯಂತಹ ವಾಣಿಜ್ಯ ಬೆಳೆ, ತೋಟಗಾರಿಕೆ ಬೆಳೆಗಳಿಗೆ ಮಾರುಕಟ್ಟೆ ಚಕ್ರ ಮತ್ತು ಇಳುವರಿ ಆಧಾರದ ಮೇಲೆ ಮೌಲ್ಯಮಾಪನ ಮಾಡಬಹುದು. ತೋಟಗಾರಿಕೆ ಬೆಳೆಗಳ ಆದಾಯ ನಿರ್ಣಯಿಸಲು ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ, ಮಸಾಲೆ ಪದಾರ್ಥ ಮಂಡಳಿ, ಗೋಡಂಬಿ ಮಂಡಳಿ, ಹಾಪ್ ಕಾಮ್ಸ್, ತೊಗರಿ ಅಭಿವೃದ್ಧಿ ಮಂಡಳಿ, ಕಾಫಿ ಮಂಡಳಿ, ಕೆಎಸ್‌ಐಸಿ, ಅಡಕೆ ಸಂಶೋಧನೆ ಮತ್ತು ಪ್ರತಿಷ್ಠಾನ, ಕೆಪೆಕ್ ಮತ್ತು ಕೆಎಂಎ್ನಂತಹ ಸಂಸ್ಥೆಗಳು ಕಾಲಕಾಲಕ್ಕೆ ಪ್ರಕಟಿಸಿದ ಬೆಲೆ ಪರಿಗಣಿಸಬೇಕು.

ಮೌಲ್ಯಮಾಪನ ಹೇಗೆ?

ಭೂಮಿ, ಆಧಾರ್, ಕುಟುಂಬ, ್ರೂಟ್ಸ್, ಪರಿವಾಹನ್, ಕಾವೇರಿ ಸೇರಿ ಸೇವಾಸಿಂಧು ಪೋರ್ಟಲ್‌ನಲ್ಲಿ ಅಂದಾಜು 800 ಆನ್‌ಲೈನ್ ಸೇವೆ ಲಿಂಕ್ ಆಗಿವೆ. ಈ ಡೇಟಾಬೇಸ್ ಪಡೆದು ಕೃಷಿ ವರಮಾನದ ಮೌಲ್ಯಮಾಪನ ಮಾಡಿ ಆದಾಯ ಪ್ರಮಾಣಪತ್ರ ವಿತರಿಸಬಹುದು.

ಮಾಸ್ಟರ್ ಮಾರ್ಗಸೂಚಿ ರೂಪಿಸಿ

ಹಿಂದಿನ ವರ್ಷದಲ್ಲಿ ಕೃಷಿ ಉತ್ಪನ್ನಗಳಿಂದ ಗಳಿಸಿದ ಆದಾಯವನ್ನು ಮೌಲ್ಯಮಾಪನಕ್ಕೆ ಪರಿಗಣಿಸಬೇಕು. ಆದಾಯದ ದತ್ತಾಂಶ ಸಂಗ್ರಹಿಸಿ ಪಟ್ಟಿ ಮಾಡಿ ವಿವಿಧ ಬೆಳೆಗಳಿಗೆ ಪ್ರತಿ ಎಕರೆಯ ಕನಿಷ್ಠ ಆದಾಯ ನಿರ್ಧರಿಸಬೇಕು. ಜತೆಗೆ ಕೃಷಿ ಆದಾಯ ಲೆಕ್ಕಚಾರ ಮಾಡುವ ಎಲ್ಲ ಮೂಲಗಳು ಮತ್ತು ವಿಧಾನಗಳಿಂದ ಆದಾಯ ನಿರ್ಣಯಿಸಲು ಮಾಸ್ಟರ್ ಮಾರ್ಗಸೂಚಿ ರೂಪಿಸಬಹುದು. ಇದರಲ್ಲಿ ವಿಎಒ, ಕಂದಾಯ ನಿರೀಕ್ಷಕರು (ಆರ್‌ಐ) ಮತ್ತು ತಹಸೀಲ್ದಾರ್‌ಗಳ ಪಾತ್ರವನ್ನು ಉಲ್ಲೇಖಿಸಬೇಕಿದೆ.

ಆದಾಯ ಮೌಲ್ಯಮಾಪನ ಅಪ್ಲಿಕೇಷನ್

ವಿಎಒಗಳ ಮೇಲಿನ ಒತ್ತಡ ಇಳಿಸಲು ಆದಾಯ ಮೌಲ್ಯಮಾಪನ ಅಪ್ಲಿಕೇಷನ್ ಅಭಿವೃದ್ಧಿಪಡಿಸಿ, ಅರ್ಜಿದಾರನಿಗೆ ವಿತರಿಸುವ 5 ವರ್ಷದ ಪ್ರಮಾಣ ಪತ್ರದ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು. ಕೃಷಿ ಆದಾಯದ ಆಗುವ ಏರುಪೇರು ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಲು ಅನುಕೂಲ ಆಗಲಿದೆ. ಪ್ರತಿ ವರ್ಷ ವಿವಿಧ ಬೆಳೆಯ ಇಳುವರಿ ಪರಿಶೀಲನೆ ನಡೆಸುವ ಸೌಲಭ್ಯ, ಎಪಿಎಂಸಿ, ಭೂಮಿ, ಕಾವೇರಿ, ಕುಟುಂಬ, ಪರಿವಾಹನ್, ್ರೂಟ್ಸ್ ಡೇಟಾ ಬೇಸ್ ಲಿಂಕ್ ಮಾಡಬೇಕು.

ಸರ್ಕಾರಕ್ಕೆ ಬಂದಿರುವ ಸಲಹೆ

- ಇ-ಆಡಳಿತ ಇಲಾಖೆಯ ನೇರ ಲಾಭ ವರ್ಗಾವಣೆ (ಡಿಬಿಟಿ)

- ಕಂದಾಯ, ಕೃಷಿ, ತೋಟಗಾರಿಕೆ, ಕಾರ್ಮಿಕ ಇಲಾಖೆ ಒಳಗೊಂಡ ಸಮಿತಿ ರಚನೆ

- ಮೇಲ್ಮನವಿ, ಕುಂದುಕೊರತೆ ವಿಲೇವಾರಿಗೆ ಆನ್‌ಲೈನ್ ಅಪ್ಲಿಕೇಷನ್ ರೂಪಿಸುವುದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net