

ಕೋಲಾರ: ಜಿಲ್ಲೆಯ ವಿವಿಧೆಡೆ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಪಡೆದಿವೆ.
ಜಿಲ್ಲೆಯಲ್ಲಿ ಮೇ 14ರವರೆಗೆ ವಾಡಿಕೆಯಂತೆ 72 ಮಿಲಿ ಮೀಟರ್ ಮಳೆಯಾಗಬೇಕಾಗಿತ್ತು. ಹೆಚ್ಚು ಎಂಬಂತೆ 79 ಮಿಮೀ ಮಳೆಯಾಗಿದ್ದು, ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಕೃಷಿ ಇಲಾಖೆಯೂ ಜಿಲ್ಲೆಯಲ್ಲಿ ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ.
ಮೂರು ತಿಂಗಳಿಂದ ಮಳೆಯಾಗದೆ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿತ್ತು. ಇದರಿಂದಾಗಿ ಜನ, ಜಾನುವಾರು ಹೈರಾಣರಾಗಿದ್ದು, ಬಿಸಿಲಿನ ತಾಪಮಾನಕ್ಕೆ ಬೆಳೆ ಬೆಳೆಯಲು ಸಾಧ್ಯವಾಗದೆ ರೈತರು ಸಂಕಷ್ಟ ಅನುಭವಿಸಿದ್ದರು. ಈಗ ಮಳೆಯಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದು, ಬೀಜ ಬಿತ್ತನೆಗಾಗಿ ಮೊದಲ ಮಳೆಯಿಂದಲೇ ಉಳುಮೆ ಮಾಡಿ ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ.
ಭಾನುವಾರ, ಸೋಮವಾರ ಉತ್ತಮ ಮಳೆಯಾಗಿದ್ದರಿಂದ ಭೂಮಿಯಲ್ಲಿ ತೇವಾಂಶವಿದ್ದು, ಎಲ್ಲೆಡೆ ಕೃಷಿ ಚಟುವಟಿಕೆ ಕಂಡುಬರುತ್ತಿದೆ. ಬುಧವಾರ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಆವರಿಸಿತ್ತು.
79 ಎಂಎಂ ಮಳೆ:
ಜಿಲ್ಲೆಯಲ್ಲಿ ಜನವರಿಯಿಂದ ಮೇ 14ರವರೆಗೆ 72 ಮಿಮೀ ವಾಡಿಕೆ ಮಳೆಯಾಗಬೇಕಿತ್ತು, ಈವರೆಗೆ 79 ಮಿಮೀ ಮಳೆಯಾಗಿದೆ. ಮಾಲೂರು, ಮುಳಬಾಗಿಲು, ಕೆಜಿಎ್ ಭಾಗದಲ್ಲಿ ಉತ್ತಮ ಮಳೆಯಾಗಿದ್ದರೆ, ಬಂಗಾರಪೇಟೆ, ಕೋಲಾರ ಹಾಗೂ ಶ್ರೀನಿವಾಸಪುರ ತಾಲೂಕು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ.
14,924 ಟನ್ ರಸಗೊಬ್ಬರ ದಾಸ್ತಾನು:
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು 10,2,590 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ, ಕಳೆದ ವರ್ಷ ಸಕಾಲದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಶೇ.52.24 ಮಾತ್ರ ಬಿತ್ತನೆ ಸಾಧನೆಯಾಗಿತ್ತು. ಪ್ರಸಕ್ತ ಸಾಲಿನಲ್ಲಿ ಮುಂಗಾರು ಪೂರ್ವದಲ್ಲೆ ಉತ್ತಮ ಮಳೆಯಾಗುತ್ತಿರುವುದರಿಂದ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀೆಯಿದೆ. ಅಂತೆಯೇ, ಬಿತ್ತನೆ ಗುರಿಯೂ ಪೂರ್ಣ ಸಾಧನೆಯಾಗುವ ನಿರೀೆಯಿದೆ. ಜಿಲ್ಲೆಯಲ್ಲಿ ಒಟ್ಟು 14,924 ಟನ್ ವಿವಿಧ ರೀತಿಯ ರಸಗೊಬ್ಬರ ದಾಸ್ತಾನಿದ್ದು, ಆ ಪೈಕಿ ಡಿಎಪಿ 809 ಟನ್, ಎಂಒಪಿ 381 ಟನ್ ಯೂರಿಯಾ 5717 ಟನ್ ಮತ್ತು ಎಸ್ಎಸ್ಪಿ 100 ಟನ್ ದಾಸ್ತಾನಿದೆ.
ಮುಂಗಾರು ಹಂಗಾಮಿಗೆ ರಾಗಿ, ನೆಲಗಡಲೆ, ಅವರೆ, ಹಲಸಂದೆ, ತೊಗರಿ ಬಿತ್ತನೆ ಬೀಜಗಳನ್ನು ಇಲಾಖಾಧಿಕಾರಿಗಳು ದಸ್ತಾನು ಮಾಡಿದ್ದಾರೆ. ಒಟ್ಟು 1,511 ಕ್ವಿಂಟಾಲ್ ಬಿತ್ತ ಬೀಜ ದಾಸ್ತಾನು ಇದ್ದು, ಆ ಪೈಕಿ ರಾಗಿ 405 ಕ್ವಿಂಟಾಲ್, ನೆಲಗಡಲೆ 1,000 ಕ್ವಿಂಟಾಲ್, ತೊಗರಿ 56 ಕ್ವಿಂಟಾಲ್ ದಾಸ್ತಾನಿದ್ದು, ರೈತ ಸಂಪರ್ಕ ಕೇಂದ್ರಗಳಿಗೆ ಸರಬರಾಜು ಮಾಡಿ, ರೈತರಿಗೆ ರಿಯಾಯಿತಿ ದರದಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಕೋಟ್…
ಜಿಲ್ಲೆಯಲ್ಲಿ ವಿವಿಧೆಡೆ ಮಳೆಯಾಗಿದ್ದು, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು ಮಾಡಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಬಿತ್ತನೆ ಬೀಜ ಪಡೆದುಕೊಳ್ಳಬಹುದು.- ಭವ್ಯಾ, ಕೃಷಿ ಇಲಾಖೆ ಉಪ ನಿರ್ದೇಶಕಿ