ತಡವಾಗಿ ಬಂದ ಶಿಕ್ಷಕಿಗೆ ಜುಟ್ಟು ಹಿಡಿದು ಹೊಡೆದ ಪ್ರಾಂಶುಪಾಲೆ; ಶಿಕ್ಷಕಿಯರ ಕಿತ್ತಾಟದ ವಿಡಿಯೋ ವೈರಲ್

viral teacher
Published on

ಲಕ್ನೋ: ಆಗ್ರಾದ ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆಯೊಬ್ಬಳು ಶಿಕ್ಷಕಿಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮೇ 3ರಂದು ಶಾಲೆಗೆ ತಡವಾಗಿ ಬಂದಿದ್ದಕ್ಕಾಗಿ ಶಿಕ್ಷಕಿ ಗುಂಜಾ ಚೌಧರಿ ಅವರಿಗೆನ್ನು ಪ್ರಾಂಶುಪಾಲರು ಬೈದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಕಿ, ಪ್ರಾಂಶುಪಾಲರು ಕೂಡ ಕಳೆದ ನಾಲ್ಕು ದಿನಗಳಿಂದ ತಡವಾಗಿ ಬರುತ್ತಿರುವುದನ್ನು ನೆನಪಿಸಿ ಆರೋಪಿಸಿದರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಅವಹೇಳನಕಾರಿ ಪದಗಳನ್ನು ಬಳಸಿ ಇಬ್ಬರು ಬೈದಾಡಿಕೊಂಡಿಕೊಂಡು ಕೈಕೈ ಮಿಲಾಯಿಸಿದ್ದಾರೆ.

ಸ್ಥಳದಲ್ಲಿದ್ದ ಇತರ ಸಿಬ್ಬಂದಿ ಮಧ್ಯ ಪ್ರವೇಶಿ ತಡೆಯಲು ಪ್ರಯತ್ನಿಸಿದರು. ಆದರೆ ಇಬ್ಬರು ಜುಟ್ಟು ಹಿಡಿದು, ಬಟ್ಟೆ ಹರಿದುಕೊಂಡು ಗಲಾಟೆ ಮಾಡಿಕೊಂಡಿದ್ದಾರೆ. ಇದರಿಂದ ಶಿಕ್ಷಕಿಯ ಕಣ್ಣಿಗೆ ಗಾಯಗಳಾಗಿವೆ. ಈ ಘಟನೆಯ ಕುರಿತು ಸಿಕಂದರಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಎರಡೂ ಕಡೆಯವರು ಪರಸ್ಪರ ದೂರು ದಾಖಲಿಸಿಕೊಂಡಿದ್ದಾರೆ.

ಆದರೆ, ಇದುವರೆಗೆ ಯಾವುದೇ ಔಪಚಾರಿಕ ಪ್ರಕರಣ ದಾಖಲಾಗಿಲ್ಲ, ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net