ಮೈತುಂಬಾ ಹಾವುಗಳು...ಬುರುಡೆ! Mahakumbh Melaದಲ್ಲಿ ಅಘೋರಿ

Mahakumbh Mela
Published on

Mahakumbh Mela: ಪ್ರಯಾಗರಾಜ್ ಕುಂಭಮೇಳಕ್ಕೆ ಭಕ್ತರ ನೂಕು ನುಗ್ಗಲು ಮುಂದುವರಿದಿದೆ. ಸಾಮಾನ್ಯ ಭಕ್ತರ ಜತೆಗೆ ಆಧ್ಯಾತ್ಮಿಕ ನಗರಿ ಸಾಧು-ಸಂತರಿಂದ ತುಂಬಿ ತುಳುಕುತ್ತಿದೆ. ಮತ್ತೊಂದೆಡೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಆದರೆ ಇತ್ತೀಚೆಗೆ ವಿಷಪೂರಿತ ಹಾವುಗಳಿಂದ ತುಂಬಿರುವ ಅಘೋರ ವಿಡಿಯೋವೊಂದು ವೈರಲ್ ಆಗಿದೆ.

ಪವಿತ್ರ ಸ್ಥಳಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಭಾರಿ ಏರಿಕೆ ಕಂಡಿದೆ.  ಸಾಧುಗಳು, ಯೋಗಿಗಳು, ಬಾಬಾಗಳು ಮತ್ತು ಅಘೋರಿಗಳು ಈ ಕುಂಭಮೇಳಕ್ಕೆ ಆಗಮಿಸುತ್ತಿದ್ದಾರೆ. ವಿದೇಶದಿಂದಲೂ ಭಕ್ತರು ಬರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಘೋರಿಯೊಬ್ಬನ ಶಾಕಿಂಗ್ ವಿಡಿಯೋ ವೈರಲ್ ಆಗಿದ್ದು, ನೋಡಿದ ಜನ ಬೆಚ್ಚಿ ಬೀಳುತ್ತಿದ್ದಾರೆ.

ಕುಂಭಮೇಳದಲ್ಲಿ ಸಾಕಷ್ಟು ವಿಷಪೂರಿತ ಹಾವು, ತಲೆಬುರುಡೆಗಳ  ಸಮೇತ ಬಂದಿದ್ದಾನೆ . ಆದರೆ ಈ ವಿಡಿಯೋ ಅಲ್ಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.  ಆದರೆ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​  ವೈರಲ್​ ಆಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ಅಘೋರಿ ಬಾಬಾ ಎಲ್ಲಿಂದ ಬಂದಿದ್ದಾನೆ ? ಕುಂಭಮೇಳದಲ್ಲಿ ಇದು ನಿಜವಾಗಿ ನಡೆದಿದೆಯೇ..? ಎಂದು ಸಾಕಷ್ಟು ಕಾಮೆಂಟ್‌ಗಳು ಬರುತ್ತಿವೆ.  ಆದರೆ ನಿಜವಾಗಲೂ ಆತ ಅಲ್ಲಿಗೆ ಬಂದಿದ್ದಾನಾ ಎಂಬುದು ಸ್ಪಷ್ಟವಾಗದಿದ್ದರೂ.. ಕುಂಭಮೇಳದಲ್ಲಿ ವಿಚಿತ್ರ ಅಘೋರಿಗಳು ಮತ್ತು ಸಾಧುಗಳು ವಿಶೇಷ ಆಕರ್ಷಣೆಯಾಗಿ ನಿಂತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net