

Court: ಬೋಲ್ಡ್ ಅವತಾರದ ಮೂಲಕ ಹೆಚ್ಚು ಸುದ್ದಿಯಲ್ಲಿರುವಂತಹ ಮಾಲಿವುಡ್ ನಟಿ ಶ್ವೇತಾ ಮೆನನ್ ವಿರುದ್ಧ ದಾಖಲಾಗಿದ್ದ ಕೇಸ್ಗೆ ಕೇರಳ ಹೈಕೋರ್ಟ್ ಗುರುವಾರ ತಡೆ ನೀಡಿದೆ.
ತಮ್ಮ ವಿರುದ್ಧ ಕೇಸ್ ರದ್ದು ಪಡಿಸುವಂತೆ ಶ್ವೇತಾ ಮೆನನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಜಿ. ಅರುಣ್ ಅವರಿದ್ದ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಅಲ್ಲದೆ, ಪೊಲೀಸರಿಗೆ ಮತ್ತು ದೂರುದಾರರಿಗೆ ನೋಟಿಸ್ ಹೊರಡಿಸಿದೆ.
ಲಾಭಗಳಿಸುವ ಉದ್ದೇಶದಿಂದ ಅಶ್ಲೀಲ ಚಲನಚಿತ್ರಗಳಲ್ಲಿ ಮತ್ತು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಮೇಲೆ ನಟಿಯ ವಿರುದ್ಧ ಕೊಚ್ಚಿಯ ಎರ್ನಾಕುಲಂ ಪೊಲೀಸರು ಬುಧವಾರ(ಜು.6) ಪ್ರಕರಣ ದಾಖಲಿಸಿದ್ದರು.
ಮಾರ್ಟಿನ್ ಮನಚೇರಿ ಹೆಸರಿನ ಸಾರ್ವಜನಿಕ ಕಾರ್ಯಕರ್ತ(ಆರ್ಟಿಐ) ನಟಿಯ ವಿರುದ್ಧ ದೂರು ಸಲ್ಲಿಸಿದ್ದಾರೆ. ಎರ್ನಾಕುಲಂ ಸಿಜೆಐ ನ್ಯಾಯಾಲಯ ಸ್ಥಳೀಯ ಪೊಲೀಸರನ್ನು ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆ ನಟಿ ಮೆನನ್ ವಿರುದ್ಧ ಆಶ್ಲೀಲ ತಡೆ ಮತ್ತು ತಂತ್ರಜ್ಞಾನ (ಐಟಿ) ಕಾಯ್ದೆಯಡಿ ಕೇಸ್ ದಾಖಲಾಗಿದೆ.(ಏಜೆನ್ಸೀಸ್)