

ಹಾವೇರಿ: ಇಂದಿನ ಯುವಕರಿಗೆ ಸೈನಿಕರು ಹೀರೋಗಳಾಗಬೇಕೇ ವಿನಃ ನಟ&ನಟಿಯರಲ್ಲ. ರಾಷ್ಟ್ರಧ್ವಜ ಗಾಳಿಯಿಂದ ಹಾರಾಡುವುದಲ್ಲ, ನಮ್ಮ ವೀರ ಸೈನಿಕರ ಉಸಿರಿನಿಂದ ಹಾರಾಡುತ್ತದೆ. ನಮ್ಮ ಮಕ್ಕಳಿಗೆ ಕೇವಲ ಅರ ಕಲಿಸದೇ ಸಂಸ್ಕಾರ, ಜೀವನ ಮೌಲ್ಯಗಳನ್ನು ಕಲಿಸಬೇಕು ಎಂದು ಪ್ರಭು ಸ್ವಾಮಿ ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.
ತಾಲೂಕಿನ ಅಗಡಿ ಗ್ರಾಮದ ಪ್ರಭು ಸ್ವಾಮಿ ಮಠದ ಆವರಣದಲ್ಲಿ ಅಗಡಿ ಮಾಜಿ ಸೈನಿಕರ ಸಂದ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ 25ನೇ ಕಾಗಿರ್ಲ್ ವಿಜಯೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಮಾರಂಭ ಉದ್ಘಾಟಿಸಿದ ತಹಸೀಲ್ದಾರ್ ಶಂಕರ ಜಿ.ಎಸ್. ಮಾತನಾಡಿ, ನೆರೆಯ ಶತ್ರು ರಾಷ್ಟ್ರದ ವಿರುದ್ಧ ಕಾಗಿರ್ಲ್ ಯುದ್ಧದಲ್ಲಿ ನಮ್ಮ ದೇಶದ ಸೈನಿಕರು ವೀರಾವೇಶದಿಂದ ಹೋರಾಡಿ ಅಂತಿಮವಾಗಿ ವಿಜಯಶಾಲಿಯಾಗಿ ರಾಷ್ಟ್ರಧ್ವಜವನ್ನು ಶಿಖರಕ್ಕೆ ಏರಿಸಿದ ಸುದಿನ. ಜೀವದ ಹಂಗು ತೊರೆದು ಹೋರಾಡಿ ಹುತಾತ್ಮರಾದ ವೀರಯೋಧರು ಸದಾ ಸ್ಮರಣೀಯರು ಎಂದರು.
ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಈ ಗೆಲುವಿನ ಹಿಂದೆ ಹಲವರ ತ್ಯಾಗ ಬಲಿದಾನವಿದೆ. ನೂರಾರು ತಾಯಂದಿರು ದೇಶಕ್ಕಾಗಿ ಮಕ್ಕಳನ್ನು ತ್ಯಾಗ ಮಾಡಿದ್ದಾರೆ. ನೂರಾರು ಮಕ್ಕಳು ತಂದೆಯನ್ನು ಕಳೆದುಕೊಂಡರು. ನೂರಾರು ಮಂದಿ ಹೆಣ್ಣು ಮಕ್ಕಳು ತಾಳಿಭಾಗ್ಯ ಕಳೆದುಕೊಂಡು ವಿಧವೆಯಾದರು. ಈ ಯುದ್ಧ ಇತ್ತೀಚಿನ ನಾಗರಿಕತೆ ಮಾತೃಭೂಮಿಯನ್ನು ಪವಿತ್ರವೆಂದು ಭಾವಿಸುವ ಮನೋವೃತ್ತಿಯನ್ನು ಕದಲಿಸಿದೆ ಎಂದರು.
ಅಕ್ಕಿ ಮಠದ ಗುರುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿಣ ಚಿಂತಕ ನಿಜಲಿಂಗಪ್ಪ ಬಸೇಗೆಣ್ಣಿ ಅಧ್ಯತೆ ವಹಿಸಿದ್ದರು. ಸಾಹಿತಿ ರಾಮಣ್ಣ ತಟ್ಟಿ ಬರೆದ "ಕಾಗಿರ್ಲ್ ಕೈಪಿಡಿ' ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು. ಗ್ರಾಮದ ಹುತಾತ್ಮ ಯೋಧರ ಕುಟುಂಬದವರನ್ನು, ಯುವ ಕೃಷಿಕರನ್ನು, ಪೌರಕಾಮಿರ್ಕರನ್ನು ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.
ಟಿ.ಎಸ್. ಪಾಟೀಲ, ಚಂದ್ರಶೇಖರ ಶಿಶುವಿನಹಳ್ಳಿ, ಗ್ರಾಪಂ ಅಧ್ಯೆ ಪ್ರೇಮಕ್ಕ ಹೊಂಬರಡಿ, ಉಪಾಧ್ಯ ಶಿವಬಸಪ್ಪ ಬಸೇಗೆಣ್ಣಿ, ಶಿವಪುತ್ರಪ್ಪ ಶಿವಣ್ಣವರ, ಶಂಬಣ್ಣ ಬಸೇಗೆಣ್ಣಿ, ಪ್ರಕಾಶ ಹಾವೇರಿ, ಜಾವೇದ ದೇವಿಹೊಸೂರು, ಬಸಯ್ಯ ಹಿರಿಯಾಳಮಠ, ಮೌಲಾಸಾಬ್ ಎಣ್ಣೆ ಮತ್ತಿತರರು ಉಪಸ್ಥಿತರಿದ್ದರು.