25ರ ಬಳಿಕ ಮತ್ತೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಧರಣಿ

mbk, lcrp okkuta president rudramma
ಎಂಬಿಕೆ, ಎಲ್‌ಸಿಆರ್‌ಪಿ, ಸಖಿಯರ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷೆ ರುದ್ರಮ್ಮ
Published on

ಶಿವಮೊಗ್ಗ: ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ಮಟ್ಟದ ಮುಖ್ಯ ಪುಸ್ತಕ ಬರಹಗಾರ(ಎಂಬಿಕೆ) ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ(ಎಲ್‌ಸಿಆರ್‌ಪಿ), ಸಖಿಯರ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು. ಇಲ್ಲವಾದರೆ ನ.25ರ ಬಳಿಕ ಮತ್ತೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಹಾ ಒಕ್ಕೂಟದ ರಾಜ್ಯಾಧ್ಯಕ್ಷೆ ರುದ್ರಮ್ಮ ಎಚ್ಚರಿಕೆ ನೀಡಿದರು.

ಸಂಘಗಳ ಆಧಾರದ ಮೇಲೆ ಗ್ರೇಡಿಂಗ್ ಮಾಡಿ ವೇತನ ನೀಡಲು ಆದೇಶ ಮಾಡಿರುವ ಸುತ್ತೋಲೆಯನ್ನು ತಕ್ಷಣ ಹಿಂಪಡೆದು ಎಲ್ಲರಿಗೂ ಸಮಾನ ಗೌರವಧನ ಅಥವಾ ವೇತನ ನೀಡಬೇಕು. ಮಾಸಿಕವಾಗಿ ಗೌರವಧನ ಎಂಬಿಕೆಗಳಿಗೆ ಕನಿಷ್ಠ 20 ಸಾವಿರ ರೂ., ಸಿಎಲ್‌ಆರ್‌ಪಿಗಳು, ಕೃಷಿ ಮತ್ತು ಪಶು ಸಖಿಯರಿಗೆ ಕನಿಷ್ಠ 15 ಸಾವಿರ ರೂ. ನೀಡಬೇಕು. ವಾರ್ಷಿಕವಾಗಿ ಸೇವಾ ಹಿರಿತನದ ಮೇಲೆ ಶೇ.10ರಷ್ಟು ವೇತನ ಹೆಚ್ಚಳ ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಲೋಕಾಸ್ ತಂತ್ರಾಂಶದಲ್ಲಿ ವ್ಯವಹಾರದ ದತ್ತಾಂಶಗಳನ್ನು ಇಂಡೀಕರಿಸಲು ಉತ್ತಮ ಫ್ಯೂಚರ್ ಹೊಂದಿರುವ ಕಂಪ್ಯೂಟರ್ ನೀಡಬೇಕು. ಒಕ್ಕೂಟದ ಪದಾಧಿಕಾರಿಗಳಿಗೆ ತಿಂಗಳಿಗೊಮ್ಮೆ ಗೌರವಧನ ನೀಡಬೇಕು. ಎಂಬಿಕೆಗಳಿಗೆ ಜಿಪಿಎಲ್‌ಎಫ್‌ನ ಚೆಕ್ ಸಹಿ ಮಾಡುವ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದರು.

ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಸಚಿವ ಶರಣ ಪ್ರಕಾಶ್ ಪಾಟೀಲ್ ನ.25ರಂದು ಸಭೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಹಾಗಾಗಿ ಅಂದು ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಸಬೇಕು. ಇಲ್ಲವಾದರೆ ಮತ್ತೊಮ್ಮೆ ಫ್ರೀಡಂಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು. ಒಕ್ಕೂಟದ ಜಿಲ್ಲಾಧ್ಯಕ್ಷೆ ದೇವಿಬಾಯಿ, ಭಾಗ್ಯಾ, ಸವಿತಾ, ವಿನೂತಾ, ಲತಾ, ರೋಜಾ, ಶೃತಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net