

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಭಾರತೀಯ ಭದ್ರತಾ ಪಡೆಗಳು ಆಪರೇಷನ್ ಜ್ಯಾಕ್ಬೂಟ್ ಎಂಬ ಕಾರ್ಯಾಚರಣೆ ಆರಂಭಿಸಿದ ಬಳಿಕ ಭಯೋತ್ಪಾದಕ ಸಂಘಟನೆಗಳಿಗೆ ಭಾರಿ ಹಿನ್ನಡೆಯಾಗಿದೆ. ಭಯೋತ್ಪಾದಕ ಪಡೆಗಳ ಪ್ರಮುಖ ಉಗ್ರನೊಬ್ಬ ಈ ವಿಷಯವನ್ನು ಸ್ವತಃ ಒಪ್ಪಿಕೊಂಡಿದ್ದಾನೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಪ್ರಮುಖ ಉಗ್ರ ಸೈಯೀದ್ ಸಲಾಹುದ್ದೀನ್ನ ಈ ಹೇಳಿಕೆಯ ವಿಡಿಯೋ ತುಣಕನ್ನು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಷಾ ಆರೋಗ್ಯದ ಬಗ್ಗೆ ರೂಮರ್: ಗುಜರಾತಿನ ನಾಲ್ವರ ಬಂಧನ
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನೇತೃತ್ವದಲ್ಲಿ ಆಪರೇಷನ್ ಜ್ಯಾಕ್ಬೂಟ್ ಅನ್ನು ರೂಪಿಸಿ, ಜಾರಿಗೊಳಿಸಲಾಗಿತ್ತು. ಈ ಕಾರ್ಯಾಚರಣೆಯ ಭಾಗವಾಗಿ ಭಾರತೀಯ ಸೇನಾಪಡೆ, ಸಿಆರ್ಪಿಎಫ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪಡೆ ಜಂಟಿಯಾಗಿ ಪುಲ್ವಾಮಾದ ಬೇಗ್ಪೋರಾ ಪ್ರದೇಶದಲ್ಲಿ ದಾಳಿ ನಡೆಸಿ ಹಿಜ್ಬುಲ್ ಮುಜಾಹಿದ್ದೀನ್ನ ಚೀಫ್ ಕಮಾಂಡರ್ ರಿಯಾಜ್ ನಾಯ್ಕೋನನ್ನು ಹತ್ಯೆ ಮಾಡಿದ್ದವು.
ನಾಯ್ಕೋ ಹತ್ಯೆಯಿಂದ ಭಾರತದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದನಾ ಸಂಘಟನೆಗೆ ಭಾರಿ ಹಿನ್ನಡೆಯಾಗಿದೆ. ಅದನ್ನೇ ಸಲಾಹುದ್ದೀನ್ ಪುನರುಚ್ಚರಿಸಿದ್ದಾನೆ ಎಂದು ಹೇಳಲಾಗಿದೆ.