ಸಾವರ್ಕರ್ ವಿವಾದಕ್ಕೆ ಕಾಂಗ್ರೆಸ್ ವಿರುದ್ಧ ಎನ್​ಸಿಪಿ ತೀವ್ರ ಕಿಡಿ

Savrkar
Published on

ನವದೆಹಲಿ: ಕಾಂಗ್ರೆಸ್​ನ ಸೇವದಾಳದ ಕೈಪಿಡಿಯಲ್ಲಿ ವೀರ ಸಾವರ್ಕರ್ ಸಲಿಂಗಿ ಎಂದು ಪ್ರಕಟಿಸಿರುವುದನ್ನು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ) ತೀವ್ರವಾಗಿ ಟೀಕಿಸಿದೆ. ಕೂಡಲೇ ಈ ವಿವಾದಾತ್ಮಕ ಕೈಪಿಡಿಯನ್ನು ವಾಪಸು ಪಡೆಯಬೇಕು ಎಂದು ಒತ್ತಾಯಿಸಿದೆ.

ಸಾವರ್ಕರ್ ಜೀವಂತವಿಲ್ಲವೆಂಬ ಕಾರಣಕ್ಕೆ ಇಂತಹ ಆರೋಪ ಮಾಡುವುದು ತಪು್ಪ. ತಕ್ಷಣ ಕೈಪಿಡಿಯನ್ನು ಹಿಂಪಡೆಯಿರಿ ಎಂದು ಆಗ್ರಹಿಸಿದೆ. ಮಧ್ಯಪ್ರದೇಶದಲ್ಲಿ ನಡೆದ ಕಾಂಗ್ರೆಸ್​ನ ಸೇವಾದಳ ಘಟಕದ ಕ್ಯಾಂಪ್​ನಲ್ಲಿ ಈ ಕೈಪಿಡಿಗಳನ್ನು ಹಂಚಲಾಗಿದೆ. ಸಾವರ್ಕರ್ ಸಲಿಂಗಿಯಾಗಿದ್ದರು, ಗಾಂಧಿ ಹಂತಕ ನಾಥೂರಾಂ ಗೋಡ್ಸೆ ಜತೆ ಅವರು ದೈಹಿಕ ಸಂಪರ್ಕ ಹೊಂದಿದ್ದರು ಎಂದು ‘ವೀರ ಸಾವರ್ಕರ್ ಎಷ್ಟು ವೀರರು’ ಎಂಬ ಕೈಪಿಡಿಯಲ್ಲಿ ಬರೆಯಲಾಗಿದೆ.

ಇದರ ಜತೆಗೆ ಸಾವರ್ಕರ್ ತಮ್ಮ ಬೆಂಬಲಿಗರಿಗೆ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸಗುವಂತೆ ಕರೆ ನೀಡಿದ್ದರು ಹಾಗೂ ಅವರು 12 ವರ್ಷದವರಿದ್ದಾಗ ಮಸೀದಿ ಮೇಲೆ ಕಲ್ಲು ತೂರಿದ್ದರು ಎಂದು ಉಲ್ಲೇಖಿಸಲಾಗಿದೆ. ಕೈಪಿಡಿ ಸಂಬಂಧ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಕೂಡ ಕಿಡಿಕಾರಿದ್ದು, ಕಾಂಗ್ರೆಸ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಮಧ್ಯೆ ರಂಜಿತ್​ಗೆ ರಕ್ತದೊತ್ತಡ ಹೆಚ್ಚಳವಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net