

ಜೋಧ್ಪುರ: ಭಾರತ ಭೇಟಿಯಲ್ಲಿದ್ದಾಗ ಕೋವಿಡ್-19, ಡೆಂಘ ಮತ್ತು ಮಲೇರಿಯಾ ರೋಗಪೀಡಿತರಾಗಿ ಗುಣಮುಖರಾದ ಬ್ರಿಟನ್ ಪ್ರಜೆ ಇಯಾನ್ ಜೋನ್ಸ್ ಇದೀಗ ಕಾಳಿಂಗ ಸರ್ಪ ಕಡಿತಕ್ಕೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ರಾಜಸ್ಥಾನದ ಜೋಧ್ಪುರ ಸಮೀಪದ ಹಳ್ಳಿಯೊಂದರಲ್ಲಿ ಕಳೆದ ವಾರ ಕಾಳಿಂಗ ಸರ್ಪವೊಂದು ಜೋನ್ಸ್ರನ್ನು ಕಚ್ಚಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಕ್ಷಿಣ ಇಂಗ್ಲೆಂಡ್ನ ಐಸ್ಲ್ ವೈಟ್ನವರಾದ ಜೋನ್ಸ್, ಹಾವು ಕಡಿತ ಬಳಿಕ ಮಂದ ದೃಷ್ಟಿ ಹಾಗೂ ನಡೆಯಲು ಸಮಸ್ಯೆ ಎದುರಿಸಿದ್ದರು. ಈ ಸಮಸ್ಯೆ ಕ್ರಮೇಣ ಗುಣಮುಖವಾಗುವುದೆಂದು ಹೇಳಿದ್ದಾರೆ.
ಜೋನ್ಸ್ ಎರಡನೇ ಬಾರಿ ಕೋವಿಡ್ಗೆ ಒಳಗಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಸ್ಥಳೀಯ ಆಸ್ಪತ್ರೆಯ ವೈದ್ಯ ಅಭಿಷೇಕ್ ಟೇಟರ್ ಹೇಳಿದ್ದಾರೆ. ಬ್ರಿಟನ್ನಲ್ಲಿ ಆರೋಗ್ಯ ಕಾರ್ಯಕರ್ತರಾಗಿದ್ದ ಜೋನ್ಸ್, ರಾಜಸ್ಥಾನದ ಸಾಂಪ್ರದಾಯಿಕ ಕುಶಲಕರ್ವಿುಗಳಿಗೆ ನೆರವಾಗುವ ಸ್ವಯಂಸೇವಾ ಸಂಸ್ಥೆಯೊಂದನ್ನು ನಡೆಸಲು ಭಾರತಕ್ಕೆ ಬಂದಿದ್ದಾರೆ. ಜೋನ್ಸ್ರ ಆಸ್ಪತ್ರೆ ವೆಚ್ಚ ಭರಿಸಲು ಹಾಗೂ ಸ್ವದೇಶಕ್ಕೆ ಮರಳಲು ಅನುಕೂಲವಾಗಲು ಅವರ ಕುಟುಂಬ 12,000 ಪೌಂಡ್ ಹಣ ಸಂಗ್ರಹ ಮಾಡಿದೆ.