ಚರಂಡಿ ನಿರ್ಮಾಣ ಬಳಿಕ ರಸ್ತೆ ಕಾಮಗಾರಿ ನಡೆಸಿ

06 mar tnp 02
ತಿ.ನರಸೀಪುರ ಟೌನ್ ಕಡ್ಲೆ ರಂಗಮ್ಮನ ಬೀದಿಯಲ್ಲಿ ಗುರುವಾರ ಸಂಸದ ಸುನೀಲ್ ಬೋಸ್ ವಿವಿಧ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿದರು. ಬಿ ವಸಂತ, ಶ್ರೀಕಂಠ, ನಾಗರತ್ನ ಮಾದೇಶ್, ಬಿ.ಕೆ.ವಸಂತಕುಮಾರಿ, ಲತಾ ಜಗದೀಶ್, ಬಾದಾಮಿ ಮಂಜು, ಬಿ.ಮರಯ್ಯ, ಎಂ.ರಮೇಶ್ ಇತರರು ಇದ್ದರು.
Published on

ಅಧಿಕಾರಿಗಳಿಗೆ ಸಂಸದ ಸುನೀಲ್ ಬೋಸ್ ಸೂಚನೆ

ತಿ.ನರಸೀಪುರ : ಒಳಚರಂಡಿ ನಿರ್ಮಾಣ ಮಾಡಿದ ಬಳಿಕ ಪುರಸಭೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಆರಂಭಿಸಿ ಎಂದು ಸಂಸದ ಸುನೀಲ್ ಬೋಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಟೌನ್ ವ್ಯಾಪ್ತಿಯ ಕಡ್ಲೆ ರಂಗಮ್ಮನ ಬೀದಿಯಲ್ಲಿ ಗುರುವಾರ 5 ಕೋಟಿ ವೆಚ್ಚದ ವಿವಿಧ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹದಗೆಟ್ಟಿರುವ ರಸ್ತೆಗಳ ಅವ್ಯವಸ್ಥೆ ಮತ್ತು ಒಳಚರಂಡಿಯನ್ನು ನಿರ್ಮಾಣ ಮಾಡದಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದು, ಒಳಚರಂಡಿ ಕಾಮಗಾರಿ ಕೈಗೊಂಡ ಬಳಿಕವೇ ರಸ್ತೆ ಕಾಮಗಾರಿ ಅರಂಭಿಸಿ ಎಂದು ಸ್ಥಳದಲ್ಲಿದ್ದ ಪುರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದಲ್ಲಿ ಹದಗೆಟ್ಟು ಹಾಳಾಗಿರುವ ರಸ್ತೆಗಳು ಹಾಗೂ ಪುರಸಭೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಅರಿವಿದೆ. ಆಡಳಿತಾತ್ಮಕ ಲೋಪಗಳನ್ನು ಸರಿಪಡಿಸಿಕೊಂಡು, ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದ್ದೇವೆ. ಮುಂದಿನ ತಿಂಗಳೊಳಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಿ, ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.

ಕಾಂಪೌಂಡ್ ನಿರ್ಮಾಣ: ಪಟ್ಟಣದ ತಲಕಾಡು ಹೆಮ್ಮಿಗೆ ಮುಖ್ಯ ರಸ್ತೆಯಲ್ಲಿರುವ ಲೋಕೋಪಯೋಗಿ ತಾಂತ್ರಿಕ ಉಪ ವಿಭಾಗದ ಕಚೇರಿಗೆ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲು 45 ಲಕ್ಷ ರೂ. ಗಳ ವೆಚ್ಚದ ಕಾಮಗಾರಿಗೆ ಸಂಸದ ಸುನೀಲ್ ಬೋಸ್ ಭೂಮಿಪೂಜೆ ಸಲ್ಲಿಸಿದರು.

ವಿದ್ಯಾರ್ಥಿನಿಯರ ಅಹವಾಲು ಆಲಿಕೆ: ಲೋಕೋಪಯೋಗಿ ಕಚೇರಿಯ ಕಾಂಪೌಂಡ್ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿದ ಬಳಿಕ ಸಂಸದರು ಪಕ್ಕದಲ್ಲಿಯೇ ಇದ್ದ ಹಿಂದುಳಿದ ವರ್ಗಗಳ ಇಲಾಖೆಯ ಡಿ.ದೇವರಾಜ ಅರಸು ವಿದ್ಯಾರ್ಥಿನಿಯರ ನಿಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲದೆ ನಿಲಯದಲ್ಲಿನ ಸೌಲಭ್ಯಗಳು ಮತ್ತು ಶೈಕ್ಷಣಿಕ ಸವಲತ್ತುಗಳ ಬಗ್ಗೆ ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದು, ಸಮಸ್ಯೆಗಳನ್ನ ಆಲಿಸಿದರು. ನಂತರ ಅತಿಗಣ್ಯರ ಅತಿಥಿಗೃಹಕ್ಕೆ ತೆರಳಿ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಕುಂದು ಕೊರತೆಗಳನ್ನು ವಿಚಾರಿಸಿದರು.

ಪುರಸಭೆ ಅಧ್ಯಕ್ಷೆ ಬಿ.ವಸಂತ ಶ್ರೀಕಂಠ, ಸದಸ್ಯರಾದ ನಾಗರತ್ನ ಮಾದೇಶ್, ಬಾದಾಮಿ ಮಂಜು, ಸಿ.ಪ್ರಕಾಶ್, ಮದನ್ ರಾಜ್, ಆರ್.ನಾಗರಾಜು, ಸಿಸ್ಟಮ್ ಸಿದ್ದು, ಮುಖ್ಯಾಧಿಕಾರಿ ಬಿ.ಕೆ.ವಸಂತ ಕುಮಾರಿ, ಕಿರಿಯ ಇಂಜಿನಿಯರ್ ಎ.ಡಿ. ನಾಗರಾಜು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಸತೀಶ್ ಚಂದ್ರ, ತಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಮಾಜಿ ಸದಸ್ಯ ಎಂ.ರಮೇಶ್, ಮೃಗಾಲಯದ ಪ್ರಾಧಿಕಾರದ ಮಾಜಿ ನಿರ್ದೇಶಕಿ ಲತಾ ಜಗದೀಶ್, ಪೋಲಿಸ್ ಇನ್‌ಸ್ಪೆಕ್ಟರ್ ಧನಂಜಯ, ಮುಖಂಡರಾದ ಸ್ವಾಮಿಗೌಡ, ಎನ್.ಮಹದೇವಸ್ವಾಮಿ, ರಾಘವೇಂದ್ರ, ಕಲಿಯೂರು ಶಿವಣ್ಣ, ಆಲಗೂಡು ನಾಗರಾಜು, ಸೋಮು ದಾದಾ, ಜೆ.ಅನುಪ್ ಗೌಡ, ಅಕ್ಕೂರು ಗುರುಮೂರ್ತಿ, ಸಂಸದರ ಆಪ್ತ ಸಹಾಯಕ ಬಿ.ಬಸವರಾಜು, ಲಕ್ಷ್ಮೀನಾರಾಯಣ, ಕುರುಬರ ಸಂಘದ ನಿರ್ದೇಶಕ ಕೆ.ಅಶ್ವಿನ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ನಿಲಸೋಗೆ ಪ್ರದೀಪ್, ಟೌನ್ ಅಂದಾನಿ ಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net