ಕೋವಿಡ್​ ಲಾಕ್​ಡೌನ್​ನ ಫಲಶ್ರುತಿ: ಆಫ್ರಿಕಾ ಸಿಂಹಗಳ ಬಿಂದಾಸ್​ ರಸ್ತೆಸಂಚಾರ

sudina 1
Published on

ನವದೆಹಲಿ: ಜಗತ್ತಿನ ಬಹುತೇಕ ದೇಶಗಳಲ್ಲಿ ಕೋವಿಡ್-19 ಸೋಂಕಿನಿಂದಾಗಿ ಲಾಕ್​ಡೌನ್ ಜಾರಿಯಲ್ಲಿದೆ. ಜನರೆಲ್ಲ ಮನೆಯೊಳಗೇ ಕುಳಿತು ಸುರಕ್ಷಿತವಾಗಿದ್ದರೆ, ಪ್ರಾಣಿಗಳು ವಾಹನಗಳ ಭಯವಿಲ್ಲದೆ ರಸ್ತೆಗಳಲ್ಲಿ ಸ್ವೇಚ್ಛೆಯಿಂದ ಸುತ್ತಾಡುತ್ತಿವೆ. ಮನಬಂದಂತೆ ತಿರುಗಾಡುತ್ತಿರುವ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಉದ್ಯಾನವನದ ಸಿಂಹಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇಲ್ಲಿ ಸಿಂಹಗಳು ಹಗಲಿನ ವೇಳೆ ರಸ್ತೆಯಲ್ಲಿ ಮಲಗುವುದು ಬಹಳ ಅಪರೂಪ. ಅಲ್ಲದೆ ಈ ಪ್ರದೇಶದಲ್ಲಿ ಸಾಮಾನ್ಯ ದಿನಗಳಲ್ಲಿ ಪ್ರವಾಸಿಗರ ಸಂಚಾರ ಕೂಡ ಹೆಚ್ಚು.

ಮಾರ್ಚ್ 25ರ ಬಳಿಕ ಲಾಕ್​ಡೌನ್ ಜಾರಿಯಾಗಿದ್ದರಿಂದ ಇದನ್ನು ಮುಚ್ಚಲಾಗಿದೆ. ಹೀಗಾಗಿ ಮನುಷ್ಯರ ಅನುಪಸ್ಥಿತಿಯಲ್ಲಿ ಸಿಂಹಗಳು ನೆಮ್ಮದಿಯಿಂದ ಸಂಚರಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net