ಪ್ರಧಾನಿ ಮೋದಿಯವರಿಗೆ ದೂರವಾಣಿ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ ಆಫ್ಘಾನ್​ ಪ್ರಧಾನಿ

narrendra Modi
Published on

ನವದೆಹಲಿ: ಇಂದು ಅಫ್ಘಾನಿಸ್ತಾನದ ಪ್ರಧಾನಮಂತ್ರಿ ಅಶ್ರಫ್​ ಘನಿ ಅವರು ಧನ್ಯವಾದ ಅರ್ಪಿಸಿದ್ದಾರೆ. ಇಂದು ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿದ ಘನಿ, ಸಮಯಕ್ಕೆ ಸರಿಯಾಗಿ, ಅಗತ್ಯ ಇರುವಷ್ಟು ವೈದ್ಯಕೀಯ ನೆರವು, ಆಹಾರವನ್ನು ಅಫ್ಘಾನಿಸ್ತಾನಕ್ಕೆ ಪೂರೈಕೆ ಮಾಡಿದ್ದಕ್ಕೆ ತುಂಬ ಧನ್ಯವಾದ ಎಂದು ಹೇಳಿದ್ದಾರೆ.

ಅದಕ್ಕೆ ಪ್ರತ್ಯುತ್ತರವಾಗಿ ಪ್ರಧಾನಿ ಮೋದಿಯವರು, ಅಫ್ಘಾನಿಸ್ತಾನದ ಜನರು ಶಾಂತಿಯಿಂದ, ಸಮೃದ್ಧವಾಗಿ ಬದುಕಲು ಭಾರತದಿಂದ ಸದಾ ಸಹಕಾರ ಸಿಗುತ್ತದೆ. ಈ ಬದ್ಧತೆಯನ್ನು ಮೀರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

ಅಷ್ಟೇ ಅಲ್ಲದೆ, ಉಭಯ ದೇಶಗಳ ನಾಯಕರು, ದ್ವಿಪಕ್ಷೀಯ ಹಿತಾಸಕ್ತಿ ಕ್ಷೇತ್ರಗಳ ಬಗ್ಗೆ, ಹೆಚ್ಚಿಸಲಾದ ಭದ್ರತಾ ವ್ಯವಸ್ಥೆಯ ಬಗ್ಗೆಯೂ ಮಾತನಾಡಿದ್ದಾರೆ. ಹಾಗೇ, ಪರಸ್ಪರ ಈದ್​ ಶುಭಾಶಯಗಳ ವಿನಿಮಯ ಮಾಡಿಕೊಂಡಿದ್ದಾರೆ ಎಂದು ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net