ವಿಮೆ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲು ಸಲಹೆ

31BTP01
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಚಪ್ಪರದಹಳ್ಳಿ ಶಾಖೆ ವತಿಯಿಂದ ಶಶಿಕಲಾ ಎಂಬುವರಿಗೆ ಎರಡು ಲಕ್ಷ ರೂ. ವಿಮೆ ಚೆಕ್ ಹಸ್ತಾಂತರ ಮಾಡಲಾಯಿತು. ಬಿ.ಕೆ .ರಮೇಶ್, ಶಶಿಕಲಾ, ಅಭಿಲಾಷ್ ಪನಲಾ, ಪುನೀತ್ ಇದ್ದರು.
Published on

ಬೆಟ್ಟದಪುರ: ಗ್ರಾಮೀಣ ಬ್ಯಾಂಕ್‌ನಲ್ಲಿ ದೊರಕುವ ವಿಮೆ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಚಪ್ಪರದಹಳ್ಳಿ ಶಾಖೆ ವ್ಯವಸ್ಥಾಪಕ ಬಿ.ಕೆ.ರಮೇಶ್ ಹೇಳಿದರು.

ಜುಲೈನಲ್ಲಿ ಚಪ್ಪರದಹಳ್ಳಿ ನಿವಾಸಿ ಸಿ.ಕೆ.ವಾಸುದೇವ್ ಎಂಬುವರು ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಪತ್ನಿ ಶಶಿಕಲಾ ಅವರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ವತಿಯಿಂದ ಬಂದ 2 ಲಕ್ಷ ರೂ.ಮೊತ್ತದ ಚೆಕ್ ಅನ್ನು ಮಂಗಳವಾರ ಶಾಖೆಯಲ್ಲಿ ವಿತರಿಸಿ ಮಾತನಾಡಿದರು. ಕುಟುಂಬಕ್ಕೆ ಆಸರೆ ಆದವರನ್ನು ನಾವು ಕಳೆದುಕೊಂಡಾಗ ದಿಕ್ಕು ಇಲ್ಲದಂತಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ವಿಮೆ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಶಾಖೆ ಸಿಬ್ಬಂದಿ ಅಭಿಲಾಷ್ ಪನಲಾ, ಪುನೀತ್, ಸ್ಥಳೀಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net