ಧರ್ಮ ಮಾರ್ಗದಲ್ಲಿ ಮುನ್ನಡೆಯಿರಿ

8-ಎಸ್ಕೆಪಿ-1
ಶಿಕಾರಿಪುರದ ರಾಘವೇಂದ್ರ ಬಡಾವಣೆ ಗಣೇಶೋತ್ಸವ ಸಮಿತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತು. ಬಿ.ವೈ.ರಾಘವೇಂದ್ರ, ಹುಲ್ಮಾರ್ ಮಹೇಶ್, ಡಿ.ಎಲ್.ಬಸವರಾಜ್ ಇತರರಿದ್ದರು.
Published on

ಶಿಕಾರಿಪುರ: ಧರ್ಮದ ಶ್ರೇಷ್ಠತೆ ನಮ್ಮ ಆಚರಣೆ ಮೇಲೆ ಬಿಂಬಿತವಾಗುತ್ತದೆ. ಸಾಧು, ಸಂತರು ಹೇಳಿಕೊಟ್ಟ ಸಂಪ್ರದಾಯವನ್ನು ಉಳಿಸಿ ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಪಟ್ಟಣದ ಶ್ರೀ ರಾಘವೇಂದ್ರ ಬಡಾವಣೆಯ ಗಣೇಶೋತ್ಸವದಲ್ಲಿ ಗಣಪತಿ ದರ್ಶನ ನಂತರ ಸಮಿತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಗಣೇಶೋತ್ಸವ ನಮ್ಮ ಸಂಸ್ಕೃತಿ, ಪರಂಪರೆ. ಶಾಂತಿ, ಸೌಹಾರ್ದದಿಂದ ಹಬ್ಬ ಆಚರಿಸಬೇಕು ಎಂದು ತಿಳಿಸಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ದೇಶದಲ್ಲಿ ಒಗ್ಗಟ್ಟು ಇರಲೆಂದು ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶೋತ್ಸವವನ್ನು ಸಾರ್ವಜನಿಕಗೊಳಿಸಿದರು. ಮುಂದಿನ ಪೀಳಿಗೆಗೆ ನಮ್ಮ ಸಂಪ್ರದಾಯಗಳ ಅರಿವು ಇರಬೇಕು ಎಂದರು.
ದೇಶಾದ್ಯಂತ ಅದ್ದೂರಿಯಿಂದ ಗಣೇಶೋತ್ಸವ ನಡೆಯಲು ತಿಲಕರ ಕೊಡುಗೆ ಅಪಾರ. ಹಬ್ಬದ ಮೂಲಕ ತಿಲಕರು ಧರ್ಮೋತ್ಥಾನ ಕಾರ್ಯ ಮಾಡಿದರು. ದೇಶದ ಅಸಂಖ್ಯಾತ ಯುವಪಡೆಗಳು ಗಣೇಶ ಹಬ್ಬ ಆಚರಿಸುತ್ತಿವೆ. ದೊಡ್ಡಪೇಟೆ ವೀರಶೈವ ಸಮಾಜದ ಗಣಪತಿ, ಹಿಂದು ಮಹಾಸಭಾ ಗಣೇಶ, ರಾಘವೇಂದ್ರ ಬಡಾವಣೆ ಗಣಪತಿ, ಓಂ ಗಣಪತಿ, ಗಿಡ್ಡಯ್ಯನ ಗಣಪತಿ ಆಕರ್ಷಕವಾಗಿವೆ ಎಂದು ತಿಳಿಸಿದರು.
ಶ್ರೀ ರಾಘವೇಂದ್ರ ಬಡಾವಣೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹುಲ್ಮಾರ್ ಮಹೇಶ್, ಗಿರೀಶ್ ಭೋಗಿ, ಡಿ.ಎಲ್.ಬಸವರಾಜ್, ಚನ್ನವೀರಪ್ಪ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೀರನ ಗೌಡ, ರಾಘವೇಂದ್ರ, ಚೇತನ್ ಭೋಗಿ, ಉಮೇಶ್, ಶೇಖರ್ ಸುಣಗಾರ್, ರಮೇಶ್, ಪರಶುರಾಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net