ಟಾಲಿವುಡ್‌ನತ್ತ ಅದಿತಿ ಶಂಕರ್: ತೆಲುಗಿನ ‘ಭೈರವಮ್’ ಚಿತ್ರದಲ್ಲಿ ನಟನೆ

adithi 1
Published on

‘ಇಂಡಿಯನ್’, ‘ಐ’, ‘ಶಿವಾಜಿ’, ‘ಎಂದಿರನ್’ ಸೇರಿ ಹಲವು ಹಿಟ್ ಸಿನಿಮಾಗಳಿಗೆ ತಮಿಳು ನಿರ್ದೇಶಕ ಎಸ್.ಶಂಕರ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಅವರ ಪುತ್ರಿ ಅದಿತಿ ಕೂಡ ಕಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. 2022ರಲ್ಲಿ ತೆರೆಕಂಡಿದ್ದ ಕಾರ್ತಿ ಅಭಿನಯದ ‘ವಿರುಮಾನ್’ ಮೂಲಕ ಅವರು ನಾಯಕಿಯಾಗಿ ಡೆಬ್ಯೂ ಮಾಡಿದ್ದರು. ಬಳಿಕ ಶಿವಕಾರ್ತಿಕೇಯನ್‌ಗೆ ಜೋಡಿಯಾಗಿ ‘ಮಾವೀರನ್’ನಲ್ಲಿ ನಟಿಸಿದ್ದರು. ಅಲ್ಲದೇ ಗಾಯಕಿಯಾಗಿರುವ ಅದಿತಿ, ನಾಲ್ಕೈದು ಸಿನಿಮಾ ಹಾಡುಗಳಿಗೂ ಧ್ವನಿಯಾಗಿದ್ದಾರೆ. ಸದ್ಯ ತಮಿಳಿನ ಎರಡು ಚಿತ್ರಗಳಲ್ಲಿ ಬಿಜಿಯಿರುವ ಅವರು, ಇದೀಗ ತೆಲುಗಿಗೂ ಪದಾರ್ಪಣೆ ಮಾಡಿದ್ದಾರೆ. ಚಿತ್ರದ ಹೆಸರು ‘ಭೈರವಮ್’. ಇದು ತಮಿಳಿನ ‘ಗರುಡನ್’ ರಿಮೇಕ್ ಆಗಿದ್ದು, ‘ಉಗ್ರಂ’, ‘ನಾಂದಿ’ ಖ್ಯಾತಿಯ ವಿಷ್ಣು ಕನಕಮೇದಲ ನಿರ್ದೇಶಿಸುತ್ತಿದ್ದಾರೆ. ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್, ಮಂಚು ಮನೋಜ್ ಹಾಗೂ ನಾರಾ ರೋಹಿತ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಇತ್ತೀಚೆಗಷ್ಟೆ ಅದಿತಿ ಶಂಕರ್ ಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ವೆನ್ನೆಲಾ ಎಂಬ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರ್ ನಿರ್ದೇಶನದ ತೆಲುಗು ಸಿನಿಮಾ ‘ಗೇಮ್ ಚೇಂಜರ್’ ಬಿಡುಗಡೆಯ ಹಾದಿಯಲ್ಲಿರುವಾಗಲೇ, ಪುತ್ರಿ ಟಾಲಿವುಡ್‌ಗೆ ಎಂಟ್ರಿ ನೀಡಿರುವುದು ವಿಶೇಷವಾಗಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net