ರಾಖಿ ಕುರಿತು ಆದಿಲ್​ ಖಾನ್​ ಶಾಕಿಂಗ್​ ಹೇಳಿಕೆ- 'ರಾಖಿಗೆ ರಿತೇಶ್​ ಜೊತೆ ಸಂಬಂಧವಿತ್ತು, ನಾನು ಮೂರ್ಖನಾದೆ ಅಷ್ಟೆ'

rakhiadil7
Published on

ರಾಖಿ ಸಾವಂತ್​ ಹೆಸರು ಕೇಳಿದ್ರೆ ಸಾಕು ಆಕೆಯನ್ನ ಡ್ರಾಮಾ ಕ್ವೀನ್​​ ಅಂತ ಕರೆಯುವವರೇ ಹೆಚ್ಚು, ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​ ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ, ಆದಿಲ್‌ಗಾಗಿ ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು.


ಆದಿಲ್​ ಕಾನ್​​ ದುರಾನಿ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿಯೂ ಇದ್ರು. ಇದೀಗ ಆದಿಲ್​ ಬಿಡುಗಡೆಗೊಂಡಿದ್ದೆ ರಾಖಿ ಕುರಿತಂತೆ ಶಾಕಿಂಗ್​ ಹೇಳಿಕೆಯೊಂದನ್ನ ನೀಡಿದ್ದಾರೆ. ಆದಿಲ್​ ಖಾನ್​ ನಿನ್ನೆಯಷ್ಟೆ ಪತ್ರಕರ್ತರ ಕಣ್ಣಿಗೆ ಕಾಣಿಸಿಕೊಂಡಿದ್ದು, ರಾಖಿ ಸಾವಂತ್​ ಕುರಿತು ಕೇಳಿದ ಪ್ರಶ್ನೆಗೆ ಅವರು, ನನ್ನನ್ನು ರಾಖಿ ಮತ್ತು ಆಕೆಯ ಸ್ನೇಹಿತರು ಸೇರಿ ಟ್ರ್ಯಾಪ್​ ಮಾಡಿದ್ದಾರೆ.


ನನ್ನನ್ನು ಹೇಗೆ ಸಿಲುಕಿಸಿದರು ಎನ್ನುವುದನ್ನು ಶೀಘ್ರದಲ್ಲಿಯೇ ಪತ್ರಿಕಾಗೋಷ್ಠಿ ಕರೆದು ವಿವರಿಸುತ್ತೇನೆ. ನಿಜವಾಗಿಯೂ ಏನು ನಡೆದಿತ್ತು ಎಂದು ಸವಿಸ್ತಾರವಾಗಿ ಹೇಳುತ್ತೇನೆ ಎಂದಿದ್ದರು. ಅದೇ ರೀತಿ ಇಂದೇ ಅವರು ಪತ್ರಿಕಾಗೋಷ್ಠಿ ಮಾಡಿದ್ದು, ರಾಖಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.


ಆದಿಲ್​ ಖಾನ್​ ಹೇಳಿದ್ದೇನು?
ರಾಖಿ ಮತ್ತು ನನ್ನ ಪರಿಚಯ ಕಾಮನ್​ ಫ್ರೆಂಡ್​​ ಮೂಲಕ ಆಗಿತ್ತು. ಬಳಿಕ ಆಕೆ ಮೈಸೂರಿಗೆ ಪದೇ ಪದೇ ಬರುತ್ತಿದ್ದಳು. ಅದೊಂದು ದಿನ ಅವಳ ಮೊಬೈಲ್​ಗೆ ಬಂದ ಮೆಸೇಜ್​ ಅನ್ನು ನಾನು ಓದಿದೆ. ಅದರಲ್ಲಿ ಲಂಡನ್​ನಲ್ಲಿ ಕಳೆದ ದಿನಗಳು ತುಂಬಾ ರೊಮ್ಯಾಂಟಿಕ್​ ಆಗಿದ್ದವು. ನಾನು ಅದನ್ನು ಮರೆಯುವುದಿಲ್ಲ ಎಂಬೆಲ್ಲಾ ಮಾತುಗಳು ಇದ್ದವು. ಅಲ್ಲಿಗೆ ರಾಖಿ ಆತನ ಜೊತೆ ಸಂಬಂಧ ಹೊಂದಿರುವುದು ತಿಳಿಯಿತು. ಅದಾಗಲೇ ರಿತೇಶ್​ ಜೊತೆ ಅವಳು ಮದುವೆಯೂ ಆಗಿದ್ದು ತಿಳಿಯಿತು. ಆದರೆ ನನ್ನಿಂದ ಈ ವಿಷಯ ಮುಚ್ಚಿಟ್ಟಿದ್ದಳು. ರಿತೇಶ್​ನನ್ನು ಮದುವೆಯಾಗಬೇಕಿತ್ತು, ಆದರೆ ಆತ ಮೋಸ ಮಾಡಿದ ಎನ್ನುತ್ತಿದ್ದಳೇ ವಿನಾ ಮದುವೆಯಾದ ವಿಷಯವನ್ನೇ ಹೇಳಿರಲಿಲ್ಲ. ಅದರೆ ಮಾಧ್ಯಮಗಳ ಮುಂದೆ ಬಂದು ನಾನೇ ಆಕೆಗೆ ತೊಂದರೆ ಕೊಡುತ್ತಿದ್ದೇನೆ ಎಂದು ಡ್ರಾಮಾ ಮಾಡಲು ಶುರು ಮಾಡಿದ್ದಳು ಎಂದು ಆದಿಲ್​ ಖಾನ್​ ಹೇಳಿದ್ದಾರೆ. ನನ್ನ ಜೀವನದ ಅತಿ ದೊಡ್ಡ ಮೂರ್ಖತನ ಎಂದರೆ ನಾನು ಆಕೆಯನ್ನು ನಂಬಿದ್ದು ಎಂದಿದ್ದಾರೆ ಆದಿಲ್​. ಆಕೆ ಗರ್ಭಕೋಶವನ್ನೂ ತೆಗೆಸಿಕೊಂಡಿದ್ದು, ಆಕೆಗೆ ಮಕ್ಕಳಾಗುವುದಿಲ್ಲ ಎಂದೂ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net