ಅದ್ಧೂರಿಯಾಗಿ ಜರುಗಿದ ದಸರಾ ಮಹೋತ್ಸವ

6-RNR-06
Published on

ರಾಣೆಬೆನ್ನೂರ: ದಸರಾ ಹಬ್ಬದ ನಿಮಿತ್ತ ತಾಲೂಕಿನ ಕರೂರ ಗ್ರಾಮದಲ್ಲಿ ವಿವಿಧ ದೇವಸ್ಥಾನಗಳ ವತಿಯಿಂದ ಅದ್ದೂರಿಯಾಗಿ ಮೆರವಣಿಗೆ ಜರುಗಿತು.

ಗ್ರಾಮದ ತುಳಜಾ ಭವಾನಿ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆಗೆ ಗ್ರಾಪಂ ಅಧ್ಯೆ ಲಲಿತಮ್ಮ ಎನ್​.ಹಿರೇಬಿದರಿ ಚಾಲನೆ ನೀಡಿದರು. ಗ್ರಾಮದ ರಸ್ತೆಗಳಲ್ಲಿ ತಳಿರುತೋರಣ ಕಟ್ಟಿ ಅಲಂಕರಿಸಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆ-ಯಲ್ಲಿ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.

ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ, ಆಂಜನೇಯ ಸ್ವಾಮಿ, ದುರ್ಗಾದೇವಿ ಪಲ್ಲಕ್ಕಿಗಳು ಗ್ರಾಮದ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಸಮಾವೇಶಗೊಂಡವು. ನಂತರ, ಎಲ್ಲ ಪಲ್ಲಕ್ಕಿಗಳು ಬನ್ನಿಮಂಟಪಕ್ಕೆ ತೆರಳಿದವು. ಅಲ್ಲಿಯೇ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು. ಅಲ್ಲದೆ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭಕ್ತರು ಬರಿಗೈಯಿಂದ ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮ ಜರುಗಿತು.

ದಸರಾ ಉತ್ಸವ ಸಮಿತಿಯ ವಾಗೀಶ ಶಾಸ್ತ್ರಿ, ಮಾಲತೇಶ ಮಣಕೂರ, ರಾಮಣ್ಣ ಬೆನ್ನೂರು, ಕೆಂಚಪ್ಪ ಸೂರ್ವೆ, ಬಸವರಾಜ ಹಳ್ಳೇರ, ಸುಭಾಷ ಸೂರ್ವೇ, ಕುರುವತ್ತೆಪ್ಪ ಬಣಕಾರ, ಹನುಮಂತ ಶ್ರೇಷ್ಠಿ ಎಚ್​.ಆರ್​., ಕುಮಾರ ಕುದುರಿ, ಮಲ್ಲಪ್ಪ ಅವತಾಡಿ, ಕರಿಯಪ್ಪ ಕಡತಿ, ಭರಮಪ್ಪ ಸಣ್ಣಗುಡಿ, ತುಕಾರಾಮ ಬಕ್ಕಜ್ಜಿ, ಶ್ರೀಕಾಂತ ಕಮ್ಮಾರ, ಮಲ್ಲಿಕಾರ್ಜುನ ಬೆಣ್ಣೆ, ಬಸವರಾಜ ಓಲೇಕಾರ, ಮಹೇಂದ್ರ ಮಡಿವಾಳರ, ರಮೇಶ ಕರಡ್ಡಿ, ನಾಗರಾಜ ಶೆಟ್ಟರ, ಮಂಜುನಾಥ ಕಡತಿ, ಅಜ್ಜಪ್ಪ ಕವಳಿಕಾಯಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net