

ಬಿಹಾರ: ಇಲ್ಲಿನ ಉನ್ನತ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಯೊಬ್ಬರು(ADC)ತಮ್ಮ ಜತೆ ಬ್ಯಾಡ್ಮಿಂಟನ್ ಆಡಲು ನಿರಾಕರಿಸಿದ ವ್ಯಕ್ತಿಯನ್ನು ಅಟ್ಟಾಡಿಸಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ.ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.
ಇಲ್ಲಿನ ಮಾಧೇಪುರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ(ಎಡಿಸಿ) ಶಶಿ ಕುಮಾರ್ ಮಿಶ್ರಾ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಈ ಸತ್ಯಾಸತ್ಯತೆ ಕುರಿತು ತರಂಜೋತ್ ಸಿಂಗ್ ಜಿಲ್ಲಾಧಿಕಾರಿ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಇನ್ನು ಈ ಘಟನೆ ಜಿಲ್ಲಾಧಿಕಾರಿ ನಿವಾಸದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿದೆ. ಈ ಪ್ರಕರಣದ ಕುರಿತು ಎಡಿಸಿ ಶಶಿ ಕುಮಾರ್ ಮಿಶ್ರಾ ಅಲ್ಲಗೆಳದಿದ್ದಾರೆ.
ವಿಡಿಯೊದಲ್ಲಿ ಕಂಡಿದ್ದೇನು..?
ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ ಎಡಿಸಿ ಶಶಿ ಕುಮಾರ್ ಮಿಶ್ರಾ ಇದ್ದಕ್ಕಿದ್ದಂತೆ ಮೂರನೇ ಆಟಗಾರ ಬೆನ್ನಟ್ಟುವುದು ಮತ್ತು ಅವರ ಮೇಲೆ ಏಕಾಏಕಿ ರಾಕೆಟ್ ಅನ್ನು ಎಸೆಯುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಪ್ರಕರಣದ ಹಿನ್ನೆಲೆ..
ಜಿಲ್ಲಾಧಿಕಾರಿ ನಿವಾಸದ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಅಭ್ಯಾಸ ಮಾಡುತ್ತಿದ್ದವರ ಬಳಿ ತೆರಳಿದ ಎಡಿಸಿ ಶಶಿ ಕುಮಾರ್, ನಮ್ಮ ಸಲ್ಪ ಹೊತ್ತು ಆಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಆಟಗಾರರು ನಿರಾಕರಿಸಿದ್ದಾರೆ. ಬಹಳ ಹೊತ್ತಿನಿಂದ ಆಟವಾಡುತ್ತಿದ್ದೇವೆ. ಹೀಗಾಗಿ, ನಮಗೆ ಸುಸ್ತು ಆಗಿದೆ ಎಂದು ಹೇಳಿದ್ದಾರೆ. ಆದರೆ, ಅಧಿಕಾರಿಗಳ ಜತೆ ಇರುವವರ ನಿರಂತ ಒತ್ತಡದಿಂದ ಆಟಗಾರರು ಆಟಕ್ಕೆ ಒಪ್ಪಿದ್ದಾರೆ. ಆಟದಲ್ಲಿ ಒಬ್ಬರು ತಪ್ಪು ಶಾಟ್ ಹೊಡೆದಿದ್ದರಿಂದ ಕೊಪಗೊಂಡ ಶಶಿ ಕುಮಾರ್ ಅವರ ಬೆನ್ನಟ್ಟಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ,(ಏಜೆನ್ಸೀಸ್).