

ನವದೆಹಲಿ: ಜಗತ್ತಿನ ಯಾವೊಬ್ಬ ಶತಕೋಟ್ಯಧಿಪತಿಯೂ ಕಳೆದುಕೊಳ್ಳದಷ್ಟು ಸಂಪತ್ತನ್ನು ಭಾರತದ ಉದ್ಯಮಿ ಗೌತಮ್ ಅದಾನಿ ಕೇವಲ ನಾಲ್ಕೇ ದಿನಗಳಲ್ಲಿ ಕಳೆದುಕೊಂಡಿದ್ದಾರೆ.
ಜಾಗತಿಕ ಶತಕೋಟ್ಯಧಿಪತಿಗಳ ಪಟ್ಟಿಯಲ್ಲಿ ಕೆಳಕ್ಕೆ ಕುಸಿದಿದ್ದಾರೆ. ಮೂರು ದಿನಗಳ ಅವಧಿಯಲ್ಲಿ ಅದಾನಿಯವರ ಸಂಪತ್ತಿನಲ್ಲಿ 66,000 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದರು. ನಾಲ್ಕನೇ ದಿನ ಈ ನಷ್ಟ 97,000 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಒಟ್ಟು ಸಂಪತ್ತು 4.7 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ.
ಕಳೆದ ವಾರ ಏಷ್ಯಾದ ಅತಿಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಅವರ ಸಮೀಪಕ್ಕೆ ತಲುಪಿದ್ದ ಅದಾನಿ, ಶುಕ್ರವಾರದಿಂದ ಹಿನ್ನೆಡೆ ಅನುಭವಿಸಲಾರಂಭಿಸಿದ್ದಾರೆ. ಅದಾನಿ ಗ್ರೂಪ್ನ ಆರು ಲಿಸ್ಟೆಡ್ ಕಂಪನಿಗಳ ಷೇರುಮೌಲ್ಯ ಕುಸಿಯಲಾರಂಭಿಸಿದೆ.