ಸುಶಾಂತ್​ ವಾಸವಾಗಿದ್ದ ಮನೆಯನ್ನು ಬಾಡಿಗೆಗೆ ಪಡೆದ ನಟಿ ಅದಾ ಶರ್ಮಾ

sad
Published on

‘ದಿ ಕೇರಳ ಸ್ಟೋರಿ’ ಸಿನಿಮಾದ ಬಿಡುಗಡೆ ಬಳಿಕ ಬಾಲಿವುಡ್​ ಬ್ಯೂಟಿ ಅದಾ ಶರ್ಮಾ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ. ಬಾಲಿವುಡ್​ನ ಖ್ಯಾತ ನಟ ಸುಶಾಂತ್​ ಸಿಂಗ್ ರಜಪೂತ್​ ಅವರು ವಾಸವಾಗಿದ್ದ ಮನೆಯನ್ನು ಅದಾ ಶರ್ಮಾ ಅವರು ಬಾಡಿಗೆಗೆ ಪಡೆದಿದ್ದಾರೆ.


ಅಪಾರ ಅಭಿಮಾನಿಗಳನ್ನು ಹೊಂದಿದ್ದ ಸುಶಾಂತ್​ ಸಿಂಗ್ ರಜಪೂತ್​ ಅವರು ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದರು. ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ್ದ ಸುಶಾಂತ್​​, ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದರು. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು ಏಕಾಏಕಿ ಸಾವಿಗೆ ಶರಣಾಗಿದ್ದು ಎಲ್ಲರಿಗೂ ನೋವು ನೀಡಿತು. ಸುಶಾಂತ್​ ಸಾವನ್ನಪ್ಪಿದ ಬಳಿಕ ಅವರ ಅಪಾರ್ಟ್​ಮೆಂಟ್​ ಬಗ್ಗೆಯೂ ಸಾಕಷ್ಟು ಗಾಸಿಪ್​ ಹರಿದಾಡಿತು.


ಅಂತಹ ವಿವಾದಿತ ಜಾಗದಲ್ಲಿ ಈಗ ಅದಾ ಶರ್ಮಾ ಅವರು ವಾಸ ಮಾಡಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಅವರ ಆ ಫ್ಲಾಟ್​ಗೆ ಶಿಫ್ಟ್​ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.


ಸುಶಾಂತ್​ ನಿಧನದ ನಂತರ ಆ ಜಾಗವನ್ನು ಖರೀದಿಸಲು ಅನೇಕರು ಆಸಕ್ತಿ ತೋರಿಸಿದ್ದರು. ಆದರೆ ಅದನ್ನು ಮಾರಲು ಅಪಾರ್ಟ್​ಮೆಂಟ್​ ಮಾಲೀಕರಿಗೆ ಇಷ್ಟವಿಲ್ಲ. ಹಾಗಾಗಿ ಕೇವಲ ಬಾಡಿಗೆಗೆ ನೀಡಬೇಕು ಎಂಬುದಷ್ಟೇ ಅವರ ಉದ್ದೇಶ. ಬಾಡಿಗೆಗೆ ಪಡೆದು ವಾಸಿಸಲು ಕೆಲವರು ಹಿಂದೇಟು ಹಾಕಿದ್ದರು. ಕೊನೆಗೂ ಅದಾ ಶರ್ಮಾ ಅವರು ಆ ಫ್ಲಾಟ್​ ಅನ್ನು ಬಾಡಿಗೆಗೆ ಪಡೆದಿದ್ದಾರೆ. ಪ್ರತಿ ತಿಂಗಳು ಅವರು ಬರೋಬ್ಬರಿ 4.5 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಾರೆ ಎಂದು ವರದಿ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net