ಹಿಂದು ಪದ್ಧತಿಯಂತೆ ನೆರವೇರಿದ ನಟಿ ಜರೀನ್ ಖಾನ್ ಅವರ ಅಂತ್ಯಕ್ರಿಯೆ: ಕಾರಣವೇನು ಗೊತ್ತೇ! | Zareen Khan

Bbau - 2025-11-08T115331.601
Published on

ಮುಂಬೈ: ಬಾಲಿವುಡ್​ನ ಖ್ಯಾತ ನಿರ್ಮಾಪಕ ಸಂಜಯ್​ ಖಾನ್​ ಅವರ ಪತ್ನಿ ಜರೀನ್​ ಖಾನ್(Zareen Khan)​ ಅವರು ಇದೇ ನ.7ರಂದು ತಮ್ಮ 81ನೇ ವಯಸ್ಸಿನಲ್ಲಿ ಹೃದಯಘಾತದಿಂದ ನಿಧನರಾದರು. ಅವರ ಅಂತ್ಯಕ್ರಿಯೆಯೂ ಅಂದೇ ನಡೆಯುತು. ಆದರೆ, ಅವರ ಅಂತ್ಯಕ್ರಿಯೆ ಹಿಂದು ಸಂಪ್ರದಾಯದಂತೆ ನೇರವೇರಿಸಲಾಗಿದೆ. ಈ ಸಂಬಂಧ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹೌದು, ಸಂಜಯ್ ಮತ್ತು ಜರೀನ್ ಅವರಿಗೆ ಸುಸ್ಸಾನ್ ಖಾನ್, ಜಾಯೆದ್ ಖಾನ್, ಫರಾ ಅಲಿ ಖಾನ್ ಮತ್ತು ಸಿಮೋನ್ ಖಾನ್ ಸೇರಿ ನಾಲ್ಕು ಮಕ್ಕಳಿದ್ದಾರೆ. ಈ ನಾಲ್ವರ ಸಮ್ಮುಖದಲ್ಲೇ ಜರೀನ್ ಅವರ ಅಂತ್ಯಕ್ರಿಯೆ ನಡೆಯಿತು. ಹಲವಾರು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಾಗ, ಅವರ ಅಂತ್ಯಕ್ರಿಯೆ ಹಿಂದು ಪದ್ಧತಿಗಳ ಪ್ರಕಾರ ನಡೆದಿದೆಯೇ ಹೊರತು ಮುಸ್ಲಿಂ ವಿಧಿವಿಧಾನಗಳ ಪ್ರಕಾರವಲ್ಲ ಎಂದು ಹಲವರು ಆಶ್ಚರ್ಯಪಟ್ಟರು.

ಹಿಂದು ಪದ್ಧತಿಯಂತೆ ಅಂತ್ಯ ಸಂಸ್ಕಾರ ಏಕೆ?

ಜರೀನ್ ಖಾನ್ ಹಿಂದವಾಗಿ ಜನಿಸಿದರು ಮತ್ತು ಮೂಲತಃ ಜರೀನ್ ಕತ್ರಕ್ ಎಂದು ಹೆಸರಿಸಲಾಯಿತು. ಸಂಜಯ್ ಖಾನ್ ಅವರನ್ನು ಮದುವೆಯಾದ ನಂತರವೂ ಅವರು ಎಂದಿಗೂ ಇಸ್ಲಾಂಗೆ ಮತಾಂತರಗೊಳ್ಳಲಿಲ್ಲ, ಇದು ಅವರ ಪತಿಯ ಮುಸ್ಲಿಂ ನಂಬಿಕೆಗಿಂತ ಹಿಂದೂ ಆಚರಣೆಗಳನ್ನು ಅನುಸರಿಸಿ ಅವರ ಅಂತ್ಯಕ್ರಿಯೆಗಳನ್ನು ಏಕೆ ನಡೆಸಲಾಯಿತು ಎಂಬುದನ್ನು ವಿವರಿಸುತ್ತದೆ. ಹೀಗಾಗಿ, ಜಾಯೆದ್ ಅವರ ಕೊನೆಯ ಆಸೆಯನ್ನು ಪೂರೈಸಿದರು ಮತ್ತು ಅವರ ತಾಯಿಗೆ ಹಿಂದೂ ಸಂಪ್ರದಾಯದಂತೆ 'ದೇಹ-ಸಂಸ್ಕಾರ'ವನ್ನು ಮಾಡಲಾಯಿತು.

ಜರೀನ್ ಕತ್ರಕ್ 1960ರ ದಶಕದಲ್ಲಿ ಜನಪ್ರಿಯ ರೂಪದರ್ಶಿಯಾಗಿ ಪ್ರಸಿದ್ಧಿ ಪಡೆದಿದ್ದರು. ಅವರು 'ತೇರೆ ಘರ್ ಕೆ ಸಾಮ್ನೆ' ಮತ್ತು 'ಏಕ್ ಫೂಲ್ ದೋ ಮಾಲಿ' ನಂತಹ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಆಕರ್ಷಕ ನಟನೆ ಮತ್ತು ಖ್ಯಾತಿಗಳಿಸಿದ್ದರು. ಆದಾಗ್ಯೂ, ಮದುವೆಯಾದ ನಂತರ ಸಿನಿಮಾದಿಂದ ದೂರ ಸರಿಸಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net