

Wamiqa Gabbi: 10 ವರ್ಷಗಳ ಹಿಂದೆ ತೆಲುಗು ಅಂಗಳದಲ್ಲಿ 'ಭಲೆ ಮಂಚಿ ರೋಜು' ಚಿತ್ರದಲ್ಲಿ ಕಾಣಿಸಿಕೊಂಡ ಚಾರ್ಮಿಂಗ್ ಬ್ಯೂಟಿ ವಾಮಿಕಾ ಗಬ್ಬಿ, ಸುಧೀರ್ ಬಾಬು ಜತೆ ಮುಖ್ಯಭೂಮಿಕೆಯಲ್ಲಿ ಮಿಂಚಿದ್ದರು. ತನ್ನ ಮೊದಲ ತೆಲುಗು ಚಿತ್ರದಲ್ಲೇ ನೈಸರ್ಗಿಕ ಸೌಂದರ್ಯದಿಂದ ನೋಡುಗರ ಗಮನ ಸೆಳೆದಿದ್ದ ವಾಮಿಕಾ, ಸಿನಿಮಾದ ಯಶಸ್ಸು ನೋಡುವಲ್ಲಿ ವಿಫಲರಾದರು. ರಿಲೀಸ್ ಆದ ಕೆಲವೇ ದಿನಗಳಲ್ಲಿ ಹೊರಬಿದ್ದ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಲಿಲ್ಲ. ಇದರಿಂದ ಟಾಲಿವುಡ್ನಲ್ಲಿ ಸಿಗಬೇಕಿದ್ದ ಇನ್ನಷ್ಟು ಆಫರ್ಗಳು ಅಲ್ಲಿಗೆ ಕಡಿತವಾಗಿ ಟಾಲಿವುಡ್ನಲ್ಲಿ ನಟಿಯ ಅದೃಷ್ಟದ ಬಾಗಿಲು ಮುಚ್ಚಿತು.
ಇದನ್ನೂ ಓದಿ: ಸಂಗೀತ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ
ಪಂಜಾಬಿ, ಹಿಂದಿ, ತಮಿಳು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹಾಟ್ ಬ್ಯೂಟಿ, ತಮ್ಮ ಸಿನಿ ವೃತ್ತಿಯಲ್ಲಿ ಇಲ್ಲಿಯವರೆಗೂ ಅಂತಹ ಸೂಪರ್ಹಿಟ್ ಸಿನಿಮಾಗಳನ್ನು ಕೊಟ್ಟಿಲ್ಲ ಎಂಬುದು ಶಾಕಿಂಗ್ ಸಂಗತಿ. ಸಾಮಾನ್ಯವಾಗಿ ಯಾವುದೇ ಚಿತ್ರರಂಗದಲ್ಲಿ ನಟರು ಅಥವಾ ನಟಿಯರು ಅಭಿನಯದ ಸಿನಿಮಾಗಳು ಹೀನಾಯ ಸೋಲು ಅನುಭವಿಸಿದರೆ ಅಲ್ಲಿಗೆ ಅವರ ಕರಿಯರ್ ಅಂತ್ಯ ಕಾಣೋದು ಖಚಿತ. ಆದರೆ, ವಾಮಿಕಾ ಕರಿಯರ್ನಲ್ಲಿ ಇದು ಕೊಂಚ ಉಲ್ಟಾ ಆಗಿದ್ದು, ಸರಣಿ ಫ್ಲಾಪ್ಗಳನ್ನು ಕಂಡಿದ್ದೇ ಆದರೂ ಈ ನಟಿಗೆ ಅವಕಾಶಗಳು ಮಾತ್ರ ಹುಡುಕಿ ಹುಡುಕಿ ಬರುತ್ತಿವೆ.
ಇತ್ತೀಚೆಗಷ್ಟೇ ಬಾಲಿವುಡ್ನಲ್ಲಿ ತೆರೆಕಂಡ ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ಅಭಿನಯದ 'ಬೇಬಿ ಜಾನ್' ಚಿತ್ರದಲ್ಲಿ ನಟಿಸಿದ ವಾಮಿಕಾ, ಈ ಸಿನಿಮಾದಲ್ಲಿಯೂ ಸೋಲು ಕಂಡರು. ಇಷ್ಟಾದರೂ ಸಹ ಬ್ಯಾಕ್ ಟು ಬ್ಯಾಕ್ ಹಲವು ಬಿಗ್ ಪ್ರಾಜೆಕ್ಟ್ಗಳ ಕೆಲಸದಲ್ಲಿ ಸಖತ್ ಬಿಜಿಯಾಗಿರುವ ತಾರೆ, ಬರೋಬ್ಬರಿ ಏಳು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಎಲ್ಲಾ ಚಿತ್ರಗಳು 2025ರಲ್ಲೇ ತೆರೆ ಕಾಣಲು ಸಜ್ಜಾಗಿದೆ ಎಂದು ಹೇಳಲಾಗಿದೆ.
ಪ್ರಸ್ತುತ ವಾಮಿಕಾ ಭಾಗಿಯಾಗಿರುವ ಏಳು ಸಿನಿಮಾಗಳು ಇದೇ ವರ್ಷ ತೆರೆ ಕಾಣಲಿದೆ ಎಂಬ ಸುದ್ದಿ ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ. ಈ ಪೈಕಿ ಒಂದು ಪಂಜಾಬಿ, ಎರಡು ತಮಿಳು, ಎರಡು ಹಿಂದಿ, ಒಂದು ತೆಲುಗು ಮತ್ತು ಒಂದು ಮಲಯಾಳಂ ಚಿತ್ರಗಳಲ್ಲಿ ವಾಮಿಕಾ ನಟಿಸುತ್ತಿದ್ದಾರೆ,(ಏಜೆನ್ಸೀಸ್).