

Vaishnavi Gowda: ನಟಿ ವೈಷ್ಣವಿ ಗೌಡ ಅವರು ಅನುಕೂಲ್ (ಅಕಾಯ್) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಫ್ಯಾನ್ಸ್ ವೈಷ್ಣವಿ ಗೌಡ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
ವೈಷ್ಣವಿ ಗೌಡ, ಅನುಕೂಲ್ (ಅಕಾಯ್) ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ವೈಷ್ಣವಿ ಗೌಡ ಅವರು ಸಾಂಪ್ರದಾಯಿಕವಾಗಿ ಎಂಗೇಜ್ ಆಗಿದ್ದು, ಸಂಜೆ ಬರ್ತ್‌ಡೇ ಪಾರ್ಟಿ ಇತ್ತು ಎನ್ನಲಾಗಿದೆ. ಈ ಪಾರ್ಟಿಯಲ್ಲಿ ವೈಷ್ಣವಿ ಗೌಡ ಅವರು ಕ್ರೀಮ್ ಕಲರ್ ಗೌನ್‌ನಲ್ಲಿ ಮಿಂಚಿದ್ದರೆ, ಅಕಾಯ್ ಅವರು ಬ್ಲ್ಯಾಕ್ ಸೂಟ್‌ನಲ್ಲಿ ಕಂಗೊಳಿಸಿದ್ದಾರೆ.
ಏಪ್ರಿಲ್ 14ರಂದು ನಟಿ ವೈಷ್ಣವಿ ಗೌಡ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟಿ ವೈಷ್ಣವಿ ಗೌಡ ಉದ್ಯಮಿ ಜೊತೆಗೆ ಮದುವೆಗೆ ರೆಡಿಯಾಗಿದ್ದಾರೆ. ಉದ್ಯಮಿ ಅನುಕೂಲ್ (ಅಕಾಯ್) ಹಾಗೂ ವೈಷ್ಣವಿ ಗೌಡ ಗುರು ಹಿರಿಯರ ಸಮ್ಮುಖದಲ್ಲಿ ಒಬ್ಬರೊಬ್ಬರು ಉಂಗುರ ಬದಲಾಯಿಸಿಕೊಂಡಿದ್ದಾರೆ.
ವೈಷ್ಣವಿ ಗೌಡ ಅವರ ಜೊತೆ ಎಂಗೇಜ್ ಆಗಿರುವ ಅಕಾಯ್ ಅವರು ಬೇರೆ ರಾಜ್ಯದವರು ಎನ್ನಲಾಗಿದೆ. ಅವರು ತಮ್ಮದೇ ಆದ ಉದ್ಯಮ ಹೊಂದಿದ್ದಾರೆ ಎನ್ನಲಾಗಿದೆ. ಈ ಮೂಲಕ ವೈಷ್ಣವಿ ಅವರು ಬಣ್ಣದ ಲೋಕದವರನ್ನು ಬಿಟ್ಟು ಹೊರಗಿನವರನ್ನು ಕೈ ಹಿಡಿಯುತ್ತಿದ್ದಾರೆ.
ವೈಷ್ಣವಿ ಅವರು ‘ಸೀತಾ ರಾಮ’ ಧಾರಾವಾಹಿಯಲ್ಲಿ ಸೀತಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರ ಸಾಕಷ್ಟು ಗಮನ ಸೆಳೆದಿದೆ.