ಡೈಮಂಡ್ ವಾಚ್ ಶೋ ಆಫ್ ಮಾಡಿದ ಊರ್ವಶಿ! ಸೈಫ್ ಅಲಿ ಖಾನ್ ಬಳಿ ಕ್ಷಮೆಯಾಚಿಸಿದರು.. Urvashi Rautela

Urvashi Rautela - Final
Published on

Urvashi Rautela:  ನಟ ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತದ ಕುರಿತು ರಿಯಾಕ್ಟ್ ಮಾಡುವಾಗ ಬಾಲಿವುಡ್ ನಟಿ ಊರ್ವಶಿ ಡೈಮಂಡ್ ವಾಚ್ ಶೋ ಆಫ್ ಮಾಡಿದ್ದು ಈ ಘಟನೆಯಿಂದ ಭಾರೀ ಟ್ರೋಲ್ ಆಗುತ್ತಿದೆ. ಈ ಕುರಿತಾಗಿ ನಟಿ ಇದೀಗ ಸೈಫ್​ ಬಳಿ ಕ್ಷಮೆ ಕೇಳಿದ್ದಾರೆ.

ಸೈಫ್ ಅಲಿಖಾನ್ ಮೇಲೆ ನಡೆದ ಹಲ್ಲೆ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ನಡೆಸುತ್ತಿರುವುದು ಗೊತ್ತೇ ಇದೆ. ಘಟನೆ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈಫ್ ಅವರನ್ನು ಈಗಾಗಲೇ ಅನೇಕ ಸೆಲೆಬ್ರಿಟಿಗಳು ಭೇಟಿ ಮಾಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಸೈಫ್ ದಾಳಿಯ ಬಗ್ಗೆ ಊರ್ವಶಿ ಅವರನ್ನು ಕೇಳಿದಾಗ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು. ಸೈಫ್ ಅಲಿ ಖಾನ್ ಅವರು ಮುಂಬೈ ಮನೆಯಲ್ಲಿ ದಾಳಿಗೆ ಒಳಗಾದ ಕುರಿತು ನಟಿ ರಿಯಾಕ್ಟ್ ಮಾಡಿದ್ದಾರೆ. ಈ ಘಟನೆ ತುಂಬಾ ದುರದೃಷ್ಟಕರ. ಈಗ ಡಾಕು ಮಹಾರಾಜ ಬಾಕ್ಸ್ ಆಫೀಸ್​ನಲ್ಲಿ 105 ಕೋಟಿ ಕ್ರಾಸ್ ಮಾಡಿದೆ. ನನ್ನ ಅಮ್ಮ ನನಗೆ ಈ ಡೈಮಂಡ್ ಇರುವ ರೋಲೆಕ್ಸ್ ವಾಚ್ ಗಿಫ್ಟ್ ಮಾಡಿದ್ದಾರೆ. ನನ್ನ ಅಪ್ಪ ನನ್ನ ಬೆರಳಿನಲ್ಲಿರುವ ಈ ಮಿನಿ ವಾಚ್​ ಗಿಫ್ಟ್ ಮಾಡಿದ್ದಾರೆ. ಆದರೆ ನಾವು ಇದನ್ನು ಹೊರಗಡೆ ಧೈರ್ಯವಾಗಿ ಇದನ್ನು ಧರಿಸಿಕೊಂಡು ಹೋಗುವಂತಿಲ್ಲ. ಹೊರಗೆ ಇಂಥಹ ಒಂದು ಅಭದ್ರತೆ ಇದೆ. ಯಾರು ಬೇಕಾದರೂ ನಮ್ಮ ಮೇಲೆ ದಾಳಿ ಮಾಡಬಹುದು. ಈಗ ಆಗಿರುವುದು ತುಂಬಾ ದುರದೃಷ್ಟಕರ ಎಂದು ನಟಿ ಹೇಳಿದ್ದಾರೆ.

ಆದರೆ ಆ ಸಮಯದಲ್ಲಿ ಊರ್ವಶಿ ತನ್ನ ವಜ್ರದ ಉಂಗುರವನ್ನು ತೋರಿಸಿ ಅದರ ಬಗ್ಗೆ ಮಾತನಾಡಿದ್ದು ತೀವ್ರ ಟೀಕೆಗೆ ಕಾರಣವಾಗಿತ್ತು. ಇತ್ತೀಚೆಗಷ್ಟೇ ಈ ವಿಚಾರವಾಗಿ ಸೈಫ್ ಬಳಿ ಕ್ಷಮೆ ಕೇಳಿದ್ದರು.

ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಹಾಕಿ, “ಸೈಫ್ ಸರ್.. ಈ ಸಂದೇಶವು ನಿಮ್ಮನ್ನು ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ಬಗ್ಗೆ ಮಾತನಾಡುವಾಗ ನಾನು ನಡೆದುಕೊಂಡ ರೀತಿಗೆ ನಾನು ವಿಷಾದಿಸುತ್ತೇನೆ. ಇದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಆ ಸಂದರ್ಶನ ಕೊಡುವಾಗ ನಿನ್ನ ಮೇಲಿನ ದಾಳಿಯ ತೀವ್ರತೆ ನನಗೆ ಗೊತ್ತಿರಲಿಲ್ಲ. ಕಳೆದ ಕೆಲವು ದಿನಗಳಿಂದ ನಾನು ಡಾಕು ಮಹಾರಾಜನ ಉತ್ಸಾಹದಲ್ಲಿದ್ದೇನೆ. ಹಾಗಾಗಿ ಆ ಸಿನಿಮಾದಿಂದ ಸಿಕ್ಕ ಉಡುಗೊರೆಗಳ ಬಗ್ಗೆ ಮಾತನಾಡಿದೆ. ಇದರಿಂದ ನನಗೆ ನಾಚಿಕೆಯಾಗುತ್ತಿದೆ. ಕ್ಷಮಿಸಿ. ಈ ದಾಳಿಯ ತೀವ್ರತೆ ತಿಳಿದು ನನಗೆ ತುಂಬಾ ಬೇಸರವಾಯಿತು. ಆ ಸಮಯದಲ್ಲಿ ನಿಮ್ಮ ಧೈರ್ಯ ನಿಜಕ್ಕೂ ಶ್ಲಾಘನೀಯ. ನಿಮ್ಮ ಬಗ್ಗೆ ಗೌರವ ಹೆಚ್ಚಿದೆ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net