

ಮುಂಬೈ: ಸೆಲೆಬ್ರಿಟಿಗಳ ಬಗ್ಗೆ ಆರೋಪ, ವದಂತಿಗಳು ಬಂದಾಗ ಮೊದಮೊದಲು ಆತಂಕಕ್ಕೆ ಒಳಗಾಗುತ್ತಿದ್ದರು. ಆದರೆ ಈಗ ಇದು ಅವರ ವೃತ್ತಿಜೀವನದ ಒಂದು ಭಾಗವೆಂದು ಪರಿಗಣಿಸಲು ಪ್ರಾರಂಭಿಸುತ್ತಿದ್ದಾರೆ. ಸಲೆಬ್ರೆಟಿಗಳ ಸಿನಿಮಾ, ಸಂಬಂಧಗಳು, ಕುಟುಂಬಗಳು, ವೈಯಕ್ತಿಕ ಜೀವನ ಮತ್ತು ಸಾರ್ವಜನಿಕವಾಗಿ ಚರ್ಚೆ ಆಗುತ್ತಲೆ ಇರುತ್ತವೆ. ಆದರೆ ಇಲ್ಲೊಬ್ಬಳು ಸ್ಟಾರ್ ನಟ ಪತ್ನಿ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯ ಕುರಿತಾಗಿ ಓಪನ್ ಆಗಿ ಮಾತನಾಡಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸುದ್ದಿಯಾಗಿದ್ದ ದಿನಗಳಲ್ಲಿ ಸ್ಟಾರ್ ಹೀರೋ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಅವರ ಪಾರ್ಟಿಗಳಲ್ಲಿ ಡ್ಯಾನ್ಸ್ ಮಾಡುತ್ತಿದ್ದರು ಎಂಬ ವರದಿಗಳು ಬಂದಿದ್ದವು. ಆ ಸುದ್ದಿ ಬಂದು ಸುಮಾರು ಹತ್ತು ವರ್ಷಗಳೇ ಕಳೆದಿವೆ. ಇಷ್ಟು ವರ್ಷಗಳ ನಂತರ ಈ ಸುದ್ದಿಗೆ ಟ್ವಿಂಕಲ್ ಪ್ರತಿಕ್ರಿಯಿಸಿದ್ದಾರೆ.
ದುಬೈನಲ್ಲಿ ದಾವೂದ್‌ನ ಪಾರ್ಟಿಗಳಲ್ಲಿ ಟ್ವಿಂಕಲ್ ಹಲವಾರು ಬಾರಿ ಭಾಗವಹಿಸಿದ್ದಾರೆ ಎಂಬ ವರದಿಗಳು ಬಿತ್ತರಗೊಂಡಿವೆ. ಇದಾದ ಬಳಿಕ ಒಮ್ಮೆ ಅಕ್ಷಯ್ ತಮ್ಮ ಪತ್ನಿ ಈ ಪಾರ್ಟಿಗಳಲ್ಲಿ ಭಾಗವಹಿಸುವ ಸುದ್ದಿಯನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಆದರೆ ಈ ಬಾರಿ ಈ ಸುದ್ದಿಗಳ ಬಗ್ಗೆ ಸ್ವತಃ ಟ್ವಿಂಕಲ್ ಮೌನ ಮುರಿದಿದ್ದಾರೆ.
ಟ್ವಿಂಕಲ್ ಕನ್ನಾ ಮಾತನಾಡಿ, ಇಲ್ಲಿಯವರೆಗೆ ಕೆಲವು ವಿಚಾರಗಳ ಕುರಿತಾಗಿ ವದಂತಿ ಹಬ್ಬಿದೆ. ಕರೋನಾ ಹಬ್ಬಿದಂತೆ ವದಂತಿಗಳು ಹಬ್ಬುತ್ತಿವೆ. ದಾವೂದ್ ಇಬ್ರಾಹಿಂ ಪಾರ್ಟಿಯಲ್ಲಿ ನಾನು ಡ್ಯಾನ್ಸ್ ಮಾಡಿದ್ದೇನೆ ಕೆಲವು ಸುದ್ದಿಗಳು ಓಡಾಡುತ್ತಿವೆ. ದಾವೂದ್ ಎದುರು ನಾನು ಡ್ಯಾನ್ಸ್ ಮಾಡಿದ್ದೇನೆ ಎನ್ನುವ ಸುದ್ದಿಗಳನ್ನು ಕೆಲವು ವಾಹಿನಿಗಳಲ್ಲಿ ನೋಡಿದ್ದೇನೆ. ನನ್ನ ಮಕ್ಕಳು ನನ್ನ ನೃತ್ಯದ ಬಗ್ಗೆ ಟೀಕೆ ಮಾಡುತ್ತಿರುತ್ತಾರೆ. ನನ್ನ ಡ್ಯಾನ್ಸ್ ನೋಡುವುದು ಡಬ್ಲ್ಯುಡಬ್ಲ್ಯುಎಫ್ ಪಂದ್ಯವನ್ನು ನೋಡಿದಂತೆ ಅಂತಾ ಹೇಳುತ್ತಾರೆ. ದಾವೂದ್ ಅವರು ಒಳ್ಳೆಯ ನೃತ್ಯಗಾರ್ತಿಯನ್ನು ಆಯ್ಕೆ ಮಾಡುತ್ತಾರೆ ಅನ್ನೋದು ಗೊತ್ತಿರಬೇಕಿತ್ತು. ನನ್ನ ಬಗ್ಗೆ ಹರಿದಾಡಿದ್ದು ಫೇಕ್ ನ್ಯೂಸ್. ಜಗತ್ತಿನ ಅತಿ ದೊಡ್ಡ ವದಂತಿಯನ್ನು ತನಗೆ ಗೊತ್ತಿಲ್ಲದಂತೆ ಸೃಷ್ಟಿಸಲಾಗಿದೆ ಎನ್ನಲಾಗಿದೆ ಎಂದಿದ್ದಾರೆ.