VIDEO | ಸಾಲು ಮರದ ತಿಮ್ಮಕ್ಕ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದ ಬಾಲಿವುಡ್ ನಟಿ

Priyanka Chahar Choudhary
Published on

ನವದೆಹಲಿ: ಹಿಂದಿ ಬಿಗ್​ಬಾಸ್ ಸೀಸನ್ 16 ರ ಸ್ಪರ್ಧಿ ನಟಿ ಪ್ರಿಯಾಂಕಾ ಚಹರ್ ಚೌಧರಿ ಅವರು, ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿ ಕಾಲಿಗೆ ನಮಸ್ಕರಿಸಿ ಆಶಿರ್ವಾದ ಪಡೆದುಕೊಂಡಿದ್ದಾರೆ. ಪ್ರಿಯಾಂಕ ಚೌಧರಿ ಆಶೀರ್ವಾದ ಪಡೆದುಕೊಳ್ಳುತ್ತಿರುವ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕೆ ಪದ್ಮಶ್ರೀ ಸಾಲುಮರದ ತಿಮಕ್ಕ ಬಂದಿದ್ದರು. ಇದೇ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಚಹರ್ ಭಾಗಿಯಾಗಲು ಬರುತ್ತಿದ್ದಂತೆ, ಸಾಲುಮರದ ತಿಮ್ಮಕ್ಕ ಅವರನ್ನು ಭೇಟಿಯಾಗಿದ್ದಾರೆ. ಕೂಡಲೇ ಸಾಲು ಮರದ ತಿಮ್ಮಕ್ಕ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ಇಬ್ಬರೂ ಕೈ ಜೋಡಿಸುವ ಮೂಲಕ ಪರಸ್ಪರ ಗೌರವವನ್ನು ತೋರಿಸಿದ್ದಾರೆ.

ಬಾಲಿವುಡ್ ನಟಿ ಪ್ರಿಯಾಂಕ ಚಹರ್ ಚೌಧರಿ 110 ವರ್ಷದ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ನಟಿಯ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net