

Taapsee Pannu: ಕೆಲವೇ ದಿನಗಳ ಹಿಂದೆ ಸ್ಟಾರ್ ನಾಯಕಿ ತಾಪ್ಸಿ ಪನ್ನು ಸ್ಲಂ ನಿವಾಸಿಗಳಿಗೆ ಫ್ಯಾನ್ ವಿತರಣೆ ಮಾಡಿದ್ದರು. ಈಗ ವಾಟರ್ ಕೂಲರ್ (Water Cooler) ನೀಡಿದ್ದಾರೆ. ಕೆಲವು ಫೋಟೋಗಳನ್ನು ತಾಪ್ಸಿ ಪನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಮಾಜಮುಖಿ ಕಾರ್ಯು ಮಾಡುತ್ತಿರುವ ಎನ್ಜಿಓ ಜತೆ ತಾಪ್ಸಿ ಪನ್ನು ಕೈ ಜೋಡಿಸಿದ್ದಾರೆ. ತಮ್ಮ ತಂಡದ ಜೊತೆ ದೆಹಲಿಯ ಕೊಳಗೇರಿಗಳ ಮನೆ ಮನೆಗೂ ತೆರಳಿ ತೆರಳಿ ತಾಪ್ಸಿ ಪನ್ನು ಅವರು ವಾಟರ್ ಕೂಲರ್ ವಿವರಣೆ ಮಾಡಿದ್ದಾರೆ.
ದೆಹಲಿ ಮುಂತಾದ ನಗರದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಶ್ರೀಮಂತರು ಹೇಗೋ ಈ ಬೇಗೆಯಿಂದ ಬಚಾವ್ ಆಗುತ್ತಾರೆ. ಆದರೆ ಬಡವರ ಪಾಡು ಕಷ್ಟಕರ ಆಗಿರುತ್ತದೆ. ಈ ಕೆಲಸ ಇತರರಿಗೂ ಸ್ಫೂರ್ತಿಯಾಗಿದೆ. ಅಭಿಮಾನಿಗಳು ತಾಪ್ಸಿ ಪನ್ನು ಅವರನ್ನು ಹೊಗಳುತ್ತಿದ್ದಾರೆ.
ತಾಪ್ಸಿ ಕಳೆದ ವರ್ಷ ತನ್ನ ಗೆಳೆಯ, ಡ್ಯಾನಿಶ್ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಜೊತೆ ಏಳು ಹೆಜ್ಜೆ ಇಟ್ಟಳು. ಇದಲ್ಲದೆ, ಕೆಲವು ದಿನಗಳ ಹಿಂದೆ, ಅವರಿಬ್ಬರೂ ಅದೇ ಬಡವರಿಗೆ ಉಚಿತ ಫ್ಯಾನ್‌ಗಳನ್ನು ವಿತರಿಸಿದರು. ತಾಪ್ಸಿ 2010 ರಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಮಿಂಚಿದ್ದ ಈ ಮುದ್ದು ಹುಡುಗಿ ಈಗ ಬಾಲಿವುಡ್‌ನಲ್ಲೂ ತನ್ನ ಪ್ರತಿಭೆಯನ್ನು ತೋರಿಸುತ್ತಿದ್ದಾಳೆ. ಅವರು ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲೂ ಮಿಂಚುತ್ತಿದ್ದಾರೆ.